ವೃದ್ದೆಯ ಮೇಲೆ ಎರಗಿದ ಶ್ವಾನ; ಹಾವೇರಿಯಲ್ಲಿ ದಾಳಿಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ

23 HVR 4
Published on

ಹಾವೇರಿ: ರಸ್ತೆಬದಿ ನಿಧಾನವಾಗಿ ನಡೆದುಕೊಂಡು ಹೊರಟಿದ್ದ ವೃದ್ದೆಯೊಬ್ಬರ ಮೇಲೆ ಬೀದಿನಾಯಿಯೊಂದು ಎರಗಿ ಗಾಯಗೊಳಿಸಿದ ಘಟನೆ ತಾಜ್ ನಗರದಲ್ಲಿ ಇತ್ತೀಚೆಗೆ ನಡೆದಿದೆ. ಶ್ವಾನದಾಳಿಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಹಿಂದಿನಿಂದ ನಾಯಿ ದಾಳಿ ಮಾಡಿದ್ದು, ಏಕಾಏಕಿ ವೃದ್ದೆಯ ಸೀರೆ ಹಿಡಿದು ಎಳೆದು ಕೆಳಗೆ ಬೀಳಿಸಿದೆ. ದಾಳಿಯಿಂದ ಗಾಬರಿಗೊಂಡ ವೃದ್ದೆ ಚೀರುತ್ತಿದ್ದಂತೆ ಅಕ್ಕಪಕ್ಕದಲ್ಲಿದ್ದ ಜನ ಬಂದು ನಾಯಿಯಿಂದ ವೃದ್ದೆಯನ್ನು ರಕ್ಷಿಸಿದ್ದಾರೆ.

ವೃದ್ದೆಯ ಮೇಲಿನ ನಾಯಿಗಳ ದಾಳಿಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಬೀದಿ ನಾಯಿಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ನಗರಸಭೆಗೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ತಾಜ ನಗರ, ನಾಗೇಂದ್ರನಮಟ್ಟಿ, ಮಟನ್ ಮಾರ್ಕೆಟ್, ದಾನೇಶ್ವರಿ ನಗರ, ಕೆರಮತ್ತಿಹಳ್ಳಿ ರಸ್ತೆ, ಅಶ್ವಿನಿ ನಗರ, ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ನಾಯಿಗಳು ಹಿಂಡು ಹಿಂಡಾಗಿ ನಿರ್ಭಯವಾಗಿ ಓಡಾಡುತ್ತಿವೆ. ಆಗಾಗ ಜನರು, ಮಕ್ಕಳ ಮೇಲೆ ದಾಳಿ ನಡೆಸಿದ ಉದಾಹರಣೆಗಳೂ ಇವೆ. ದೊಡ್ಡ ಅನಾಹುತ ಸಂಭವಿಸುವ ಮುನ್ನವೇ ಬೀದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕಬೇಕು ಎಂದು ಸ್ಥಳೀಯ ನಿವಾಸಿ ದಾದಾಪೀರ್ ಚೂಡಿಗಾರ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net