ಹಾವೇರಿ: ಹಾವೇರಿ: ಜಿಲ್ಲೆಯ 80 ಪರೀಕ್ಷಾ ಕೇಂದ್ರಗಳಲ್ಲಿ ಬುಧವಾರ ಎಸ್.ಎಸ್.ಎಲ್.ಸಿ. ವಿಜ್ಞಾನ ವಿಷಯದ ಪರೀಕ್ಷೆ ಸುಗಮವಾಗಿ ಜರುಗಿತು.
ವಿಜ್ಞಾನ ಪರೀಕ್ಷೆಗೆ ನೋಂದಾಯಿಸಿಕೊಂಡ 22,200 ವಿದ್ಯಾರ್ಥಿಗಳ ಪೈಕಿ 21,859 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು, 341 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.