ಸೌಜನ್ಯ ಅತ್ಯಾಚಾರ, ಕೊಲೆ ಆರೋಪ ಪ್ರಕರಣದ ಪುನರ್ ತನಿಖೆಗೆ ಆಗ್ರಹ

14 HVR 6
Published on

ಹಾವೇರಿ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಆರೋಪ ಪ್ರಕರಣದ ಪುನರ್ ತನಿಖೆ ಮಾಡುವಂತೆ ಮತ್ತು ತನಿಖೆಯಲ್ಲಿ ಲೋಪವೆಸಗಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶ್ರೀರಾಮ ಸೇವಾ ಜಿಲ್ಲಾ ಘಟಕದ ವತಿಯಿಂದ ಬುಧವಾರ ಹಾವೇರಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸೇನಾದ ಧಾರವಾಡ ವಿಭಾಗ ಅಧ್ಯಕ್ಷ ಗದಿಗೆಪ್ಪ ಕುರವತ್ತಿ, ಉಮೇಶ ಎಂ.ಟಿ., ಕಲ್ಮೇಶ ಹಿರೇಗೌಡ್ರ, ಪರಪ್ಪಾ ಅರಳಿಕಟ್ಟಿ, ಫಕ್ಕೀರೇಶ ಕಾಳೆ, ಅಭಿಷೇಕ ಅಕ್ಕಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net