ನಗದು ಬಹುಮಾನ ಸೌಲಭ್ಯಕ್ಕೆ ಅರ್ಜಿ ಆಹ್ವಾನ

Published on

ಹಾವೇರಿ: ನಗದು ಬಹುಮಾನ ಸೌಲಭ್ಯಕ್ಕೆ 2021 ಮತ್ತು 2022ನೇ ಸಾಲಿನಲ್ಲಿ ರಾಷ್ಟ್ರ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಪದಕ ಪಡೆದ ಕರ್ನಾಟಕ ಕ್ರೀಡಾಪಟುಗಳು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ರಾಷ್ಟ್ರಕ್ಕೆ ಕೀರ್ತಿ ತಂದ ಕರ್ನಾಟಕದ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಭಾರತ ಸರ್ಕಾರದಿಂದ ಅಂಗೀಕೃತವಾಗಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಭಾಗವಹಿಸಿದಲ್ಲಿ ಮತ್ತು ಪದಕ ವಿಜೇತರಾದಲ್ಲಿ 52,000 ರೂ. ನಗದು ಪುರಸ್ಕಾರ ನೀಡಲಾಗುವುದು. ಒಲಿಂಪಿಕ್ ಗೇಮ್ಸ್, ಏಷಿಯನ್ ಗೇಮ್ಸ್, ಕಾಮನ್ ವೆಲ್ತ್ ಗೇಮ್ಸ್, ನ್ಯಾಷನಲ್ ಚಾಂಪಿಯನ್ (ಒಲಂಪಿಕ್ ಕ್ರೀಡೆಗಳಿಗೆ ಮಾತ್ರ), ಜೂನಿಯರ್ ನ್ಯಾಷನಲ್ (ಒಲಂಪಿಕ್ ಕ್ರೀಡೆಗಳಿಗೆ ಮಾತ್ರ) ಹಾಗೂ ಸಬ್ ಜೂನಿಯರ್ ನ್ಯಾಷನಲ್(ಒಲಂಪಿಕ್ ಕ್ರೀಡೆಗಳಿಗೆ ಮಾತ್ರ) ಕ್ರೀಡೆಗಳಲ್ಲಿ ಭಾಗವಹಿಸಿರಬೇಕು.
ಅರ್ಹ ಕ್ರೀಡಾಪಟುಗಳು ಅರ್ಜಿ ನಮೂನೆಯನ್ನು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಹಾವೇರಿ ಕಚೇರಿಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ನ.27ರೊಳಗಾಗಿ ಸಲ್ಲಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net