ಜಿಲ್ಲಾ ಕ್ರೀಡಾ ಶಾಲೆಗೆ ಆಯ್ಕೆ ಪ್ರಕ್ರಿಯೆ 10ರಿಂದ

Published on

ಹಾವೇರಿ: ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಕ್ರೀಡಾ ವಸತಿ ಶಾಲೆಗೆ 2025-26ನೇ ಸಾಲಿಗೆ 5ನೇ ತರಗತಿ ಪ್ರವೇಶಕ್ಕೆ ಫೆ.10ರಿಂದು 15ರವರೆಗೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಆಯ್ಕೆ ಪ್ರಕ್ರಿಯೆ ಜರುಗಲಿದೆ.

ಬಾಲಕ ಮತ್ತು ಬಾಲಕಿಯರನ್ನು ಅಥ್ಲೆಟಿಕ್ಸ್ ಹಾಗೂ ಹಾಕಿ ಕ್ರೀಡೆಗಳ ಆಯೋಜನೆ ಮಾಡಲಾಗುವುದು. ವಿದ್ಯಾರ್ಥಿಯು ದಿನಾಂಕ 01-06-2025ಕ್ಕೆ 11 ವರ್ಷದೊಳಗಿರಬೇಕು. ಅಂದರೆ ದಿನಾಂಕ 31-05-2014ರ ನಂತರ ಜನಿಸಿರಬೇಕು.

ಫೆ.10ರಂದು ಸವಣೂರ ಹಾಗೂ ಬ್ಯಾಡಗಿ, ಫೆ.11ರಂದು ಶಿಗ್ಗಾಂವಿ, ಫೆ.12ರಂದು ಹಾನಗಲ್ಲ ಹಾಗೂ ಹಿರೇಕೆರೂರ, ಫೆ.13ರಂದು ರಟ್ಟಿಹಳ್ಳಿ (ಕುಮಾರೇಶ್ವರ ಫ್ರೌಡಶಾಲೆ), ಫೆ.14ರಂದು ರಾಣೆಬೆನ್ನೂರ ತಾಲೂಕು ಕ್ರೀಡಾಂಗಣಗಳಲ್ಲಿ ಹಾಗೂ ಫೆ.15ರಂದು ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆವರೆಗೆ ಆಯ್ಕೆ ಪ್ರಕ್ರಿಯೆ ಜರುಗಲಿದೆ.

ಯಾವುದೇ ತಾಲೂಕಿನ ಅರ್ಹ ವಿದ್ಯಾರ್ಥಿಗಳು ಮೇಲಿನ ದಿನಾಂಕಗಳಂದು ಆಯ್ಕೆಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದಲ್ಲಿ ಫೆ.15ರಂದು ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಮುಖ್ಯೋಪಾಧ್ಯಾಯರಿಂದ ಜನ್ಮ ದಿನಾಂಕದ ದೃಢೀಕರಣದ ಮೂಲ ಪ್ರತಿಯೊಂದಿಗೆ ಭಾಗವಹಿಸಬಹುದು.

ಜಿಲ್ಲೆಯ ಎಲ್ಲ ತಾಲೂಕುಗಳ ವಿದ್ಯಾರ್ಥಿಗಳು ಮೇಲ್ಕಂಡ ದಿನಾಂಕಗಳಂದು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಯಾವುದೇ ರೀತಿಯ ಪ್ರವಾಸ ಭತ್ಯೆ ಹಾಗೂ ದಿನಭತ್ಯೆ ನೀಡಲಾಗುವುದಿಲ್ಲ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net