

ಹಾವೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ರೋಟರಿ ಕ್ಲಬ್ ಸಹಯೋಗದಲ್ಲಿ ಮೇಜರ್ ಧ್ಯಾನಚಂದ್ ಅವರ ಜನ್ಮದಿನದ ಪ್ರಯುಕ್ತ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಮ್ಯಾರಥಾನ್ ಮೂಲಕ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಯಿತು.
ಪುರುಷರಿಗೆ 5 ಕಿ.ಮೀ., ಮಹಿಳೆಯರಿಗೆ 3 ಕಿ.ಮೀ. ಹಾಗೂ ಹಿರಿಯರಿಗೆ 1 ಕಿ.ಮೀ. ವೇಗದ ನಡಿಗೆ ಮ್ಯಾರಥಾನ್ ಸ್ಪರ್ಧೆ ಆಯೋಜಿಸಲಾಗಿತ್ತು. ವಿವಿಧ ವಿಭಾಗಗಳಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಕ್ರೀಡಾ ಇಲಾಖೆಯಿಂದ ನಗದು ಬಹುಮಾನ, ಪ್ರಮಾಣ ಪತ್ರ, ಟ್ರೋಫಿ ವಿತರಿಸಲಾಯಿತು.
ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲತಾ ಬಿ.ಎಚ್., ತರಬೇತುದಾರರಾದ ಪ್ರದೀಪ, ಸುಭಾಷ ಶಂಕರಿಕೊಪ್ಪ, ಹಿರಿಯ ಕ್ರೀಡಾಪಟು ಗಣೇಶ ರಾಯ್ಕರ, ಬಸವರಾಜ ಮಾಸೂರ, ಇತರರಿದ್ದರು.
ಯೋಗಾಸನ ಸ್ಪರ್ಧೆ ಇಂದು :
ಆ.30ರಂದು ಯೋಗ ಸ್ಪರ್ಧೆ, ಆ.31ರಂದು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ನಡೆಯಲಿದೆ ಎಂದು ಇಲಾಖೆಯ ಎಡಿ. ಲತಾ ಬಿ.ಎಚ್. ತಿಳಿಸಿದರು.