

ಹಾವೇರಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಸುರಕ್ಷತೆ ಹಾಗೂ ಮತದಾನ ಪ್ರಕ್ರಿಯೆ ಭದ್ರತಾ ವ್ಯವಸ್ಥೆ ಕುರಿತಂತೆ ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ನೇತೃತ್ವದಲ್ಲಿ ಹಾವೇರಿ ನಗರದಲ್ಲಿ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಲಾಯಿತು. ಕೇರಳ ಪೊಲೀಸ್ ಪೋರ್ಸ್, ಕೆಎಸ್‌ಆರ್‌ಪಿ ತುಕುಡಿ, ಹೋಮ್ ಗಾರ್ಡ್ಸ್ ಮತ್ತು ಸ್ಥಳೀಯ ಪೊಲೀಸರು ಪಾಲ್ಗೊಂಡಿದ್ದರು.