ಪೊಲೀಸ್ ಮಕ್ಕಳ ಬೇಸಿಗೆ ಮನರಂಜನಾ ಶಿಬಿರ ಸಂಪನ್ನ

26 HVR 3
Published on

ಹಾವೇರಿ: ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯ ಮಕ್ಕಳಿಗಾಗಿ ಎಸ್‌ಪಿ ಕಚೇರಿಯಲ್ಲಿ ಒಂದು ತಿಂಗಳ ಕಾಲ ಹಮ್ಮಿಕೊಂಡಿದ್ದ ಬೇಸಿಗೆ ಮನೋರಂಜನಾ ಶಿಬಿರ- 2025ರ ಸೋಮವಾರ ಸಂಪನ್ನಗೊಂಡಿತು.

ಇಲ್ಲಿನ ಗುರುಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಮಾರೋಪ ಸಮಾರಂಭವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಉದ್ಘಾಟಿಸಿ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಕ್ಕಳು ಶಿಬಿರದಲ್ಲಿ ರಚಿಸಿರುವ ಕಲಾಕೃತಿಗಳ ಪ್ರದರ್ಶಿನಿಯನ್ನು ವೀಕ್ಷಿಸಿದರು.

ಶಿಬಿರದ ಮಕ್ಕಳು ಕರಾಟೆ, ಭರತನಾಟ್ಯ, ನೃತ್ಯ ಪ್ರದರ್ಶಿಸಿದರು. ಶಿಬಿರದಲ್ಲಿ ಕಂಪ್ಯೂಟರ್, ಯೋಗ, ಕರಾಟೆ, ನೃತ್ಯ, ಚಿತ್ರಕಲೆ, ಗಾಯನ, ಮತ್ತಿತರ ತರಬೇತಿ ನೀಡಲಾಯಿತು ಎಂದು ಶಿಬಿರದ ಸಂಯೋಜಕ ಪಿ.ಎಸ್ ಬಾಳಿಕಾಯಿ ತಿಳಿಸಿದರು.

ಸಿಇಎನ್ ಠಾಣೆಯ ಡಿವೈಎಸ್‌ಪಿ ಪ್ರಜ್ಞಾ ಆನಂದ, ಗಾಯತ್ರಿ ಹೆಗಡೆ, ಕರಿಯಪ್ಪ ಹಂಚಿನಮನಿ, ಶಿಬಿರದ ಶಿಕ್ಷಕರು, ಪಾಲಕರು, ಮಕ್ಕಳು, ಮತ್ತಿತರರು ಉಪಸ್ಥಿತರಿದ್ದರು. ಬಸವಪ್ರಸಾದ ಬಾಳಿಕಾಯಿ ಸಂವಿಧಾನ ಪೀಠಿಕೆ ಪ್ರಮಾಣ ವಚನ ಬೋಧಿಸಿದರು. ಸಹಾಯಕ ಆಡಳಿತಾಧಿಕಾರಿ ಪಿ.ಎಸ್ ಬಾಳಿಕಾಯಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net