ಪೊಲೀಸ್ ಮಕ್ಕಳ ಬೇಸಿಗೆ ಶಿಬಿರಕ್ಕೆ ಎಸ್‌ಪಿ ಚಾಲನೆ

Haveri, SP Office, Summer camp, for police children,
Published on

ಹಾವೇರಿ: ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ಜಿಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮಕ್ಕಳಿಗಾಗಿ ಹಮ್ಮಿಕೊಂಡಿರುವ ಬೇಸಿಗೆ ಶಿಬಿರಕ್ಕೆ ಎಸ್‌ಪಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ಪೊಲೀಸ್ ಅಧೀಕ್ಷಕ ಅಂಶುಕುಮಾರ ಚಾಲನೆ ನೀಡಿದರು.

ಪೊಲೀಸ್ ಉಪ ಅಧೀಕ್ಷಕ ಲಕ್ಷ್ಮಣ ಶಿರಕೋಳ ಮತ್ತು ಸಹಾಯಕ ಆಡಳಿತಾಧಿಕಾರಿ ಪರಮೇಶ್ವರ ಬಾಳಿಕಾಯಿ ಅವರ ಸಹಕಾರದಿಂದ ಒಂದು ತಿಂಗಳ ಕಾಲ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ಯೋಗ, ವಾಲಿಬಾಲ್, ನೃತ್ಯ, ಸಂಗೀತ, ಚಿತ್ರಕಲೆ, ಕರಾಟೆ, ಯಕ್ಷಗಾನ, ದೊಡ್ಡಾಟ, ಹತ್ತಿರದ ಸ್ಥಳಕ್ಕೆ, ಮತ್ತಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿಬಿರದ ಸಂಯೋಜಕಿ ಜಿಲ್ಲಾ ಸಮಾಲೋಚಕಿ ಗಾಯತ್ರಿ ಹೆಗಡೆ ತಿಳಿಸಿದ್ದಾರೆ.

ಸಮಾರಂಭದಲ್ಲಿ ಸಿಇಎನ್ ಠಾಣೆ ಡಿಎಸ್‌ಪಿ ಪ್ರಜ್ಞಾ ಆನಂದ, ಎಸ್‌ಪಿ ಕಚೇರಿ ಸಹಾಯಕ ಆಡಳಿತಾಧಿಕಾರಿ ಪರಮೇಶ್ವರ ಬಾಳಿಕಾಯಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net