ಪೊಲೀಸರಿಂದ ನಗರದಲ್ಲಿ ಪಥಸಂಚಲನ

19 HVR 7 A
Published on

ಹಾವೇರಿ: ಗೌರಿ- ಗಣೇಶ ಚತುರ್ಥಿ ಅಂಗವಾಗಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಪೊಲೀಸರು ಪಥ ಸಂಚಲನದ ಮೂಲಕ ಜನ ಜಾಗೃತಿ ಮೂಡಿಸಿದರು.
ಶಾಂತಿಯುತ ಹಬ್ಬ ಆಚರಣೆ, ಕಾನೂನು ಸುವ್ಯವಸ್ಥೆ ಹಾಗೂ ಪೊಲೀಸ್ ರಕ್ಷಣೆಯ ಕುರಿತಂತೆ ಜನತೆಗೆ ಜಾಗೃತಿ ಮೂಡಿಸಲು ನಗರದ ಹುಕ್ಕೇರಿ ಮಠ ಆವರಣದಿಂದ ಪೊಲೀಸ್ ರೂಟ್ ಮಾರ್ಚ್ ಆರಂಭವಾಯಿತು. ಎಂ.ಜಿ. ರಸ್ತೆ, ಸುಭಾಸ ವೃತ್ತ, ಗಾಂಧೀ ವೃತ್ತ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮುಕ್ತಾಯಗೊಂಡಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ ರೂಟ್ ಮಾರ್ಚ್‌ಗೆ ಚಾಲನೆ ನೀಡಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಸಿ.ಗೋಪಾಲ, ಡಿವೈಎಸ್‌ಪಿ ಎನ್.ಎಸ್.ಪಾಟೀಲ, ಸೇರಿದಂತೆ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಗೃಹರಕ್ಷಕದಳ ಸಿಬ್ಬಂದಿ ಕಾಲ್ನಡಿಗೆ ಹಾಗೂ ಬೈಕ್ ಮೂಲಕ ರೂಟ್ ಮಾರ್ಚ್‌ನಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net