ಹಾವೇರಿ: ನಗರದ ಡಿಎಆರ್ ಘಟಕದಲ್ಲಿ ಬುಧವಾರ ಎಸ್‌ಪಿ ಯಶೋಧಾ ವಂಟಗೋಡಿ ಅವರು ಆಯುಧ ಪೂಜೆ ಅಂಗವಾಗಿ ಪೊಲೀಸ್ ಇಲಾಖೆಯ ಬಂದೂಕುಗಳು, ಇತರ ಶಸಗಳು ಹಾಗೂ ವಿವಿಧ ವಾಹನಗಳ ಪೂಜೆ ನೆರವೇರಿಸಿದರು. ನಂತರ ನಗರದಲ್ಲಿ ವಾಹನಗಳ ರ‌್ಯಾಲಿ ನಡೆಯಿತು. ಡಿಎಆರ್ ಡಿವೈಎಸ್‌ಪಿ ಎಂ.ಎನ್.ಹನಕನಹಳ್ಳಿ, ಇತರರಿದ್ದರು.