

ಹಾವೇರಿ: ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಂಪರ್ಕ ಸಭೆ ಹಾಗೂ ವಿಷಯಾಧಾರಿತ ತರಬೇತಿ ಕಾರ್ಯಾಗಾರವನ್ನು ಸಂಯುಕ್ತ ಸಹಕಾರಿ ಸಂಘದ ಅಧ್ಯಕ್ಷ ಜಿ.ನಂಜನಗೌಡ ಉದ್ಘಾಟಿಸಿದರು. ಸಹಕಾರಿಯ ನಿರ್ದೇಶಕರಾದ ಕೆ.ಶಿವಲಿಂಗಪ್ಪ, ಉದಯ ಕುರಡೇಕರ, ರಮೇಶ ಪಾಟೀಲ, ಮೋಹನ ರಾಯ್ಕರ, ಕಲ್ಮೇಶ ಎಂ., ಪ್ರವೀಣ ಬಾರ್ಕಿ, ಗಂಗಮ್ಮ ನಾಯ್ಕರ, ಇತರರಿದ್ದರು.