

ಹಾವೇರಿ: ಪುತ್ರ ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿ ಕೇಳಿದ ತಂದೆಯೂ ಹೃದಯಾಘಾತದಿಂದ ಮೃತಪಟ್ಟ ಹೃದಯ ಕಲಕುವ ಘಟನೆ ನಗರದಲ್ಲಿ ಮಂಗಳವಾರ ಸಂಭವಿಸಿದೆ. ಈ ಮೂಲಕ ಅವರ ತಂದೆ ಪ್ರೀತಿಯ ಮಗನ ಸಾವನ್ನೂ ಹಂಚಿಕೊಂಡಿದ್ದಾರೆ.
ಬಸವೇಶ್ವರ ನಗರ ನಿವಾಸಿಗಳಾದ ಡಾ.ವಿನಯ ಗುಂಡಗಾವಿ (38) ಹಾಗೂ ಡಾ.ವೀರಭದ್ರಪ್ಪ ಗುಂಡಗಾವಿ (72) ಮೃತಪಟ್ಟವರು.
ಚಿಕ್ಕಮಕ್ಕಳ ತಜ್ಞ ಡಾ.ವಿನಯ ಗುಂಡಗಾವಿ ಸೋಮವಾರ ತಡರಾತ್ರಿ ಕೆಲಸದ ನಿಮಿತ್ತ ಬೇರೆಡೆ ಹೋಗಿದ್ದಾಗ ಹೃದಯಾಘಾತದಿಂದ ಸಾವನ್ನಪಿದ್ದರು. ಬೆಳಗ್ಗೆ ಈ ವಿಷಯ ಕೇಳಿದ ತಂದೆ ಡಾ.ವೀರಭದ್ರಪ್ಪ ಗುಂಡಗಾವಿ ತೀವ್ರ ಹೃದಯಾಘಾತಕ್ಕೆ ಒಳಗಾದರು. ತಕ್ಷಣ ಚಿಕಿತ್ಸೆ ಕೊಡಿಸಿದರೂ ಬದುಕಲಿಲ್ಲ.
ಜಿಲ್ಲಾಸ್ಪತ್ರೆಯಲ್ಲಿ ಉತ್ತಮ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ್ದ ಡಾ.ವೀರಭದ್ರಪ್ಪ ಗುಂಡಗಾವಿ ಜನಪ್ರಿಯತೆ ಗಳಿಸಿದ್ದರು. ಮಗನ ಸಾವಿನ ಸುದ್ದಿಕೇಳಿ ಸಾವಲ್ಲೂ ಪುತ್ರಪ್ರೇಮ ಮೆರೆದಿದ್ದಾರೆ. ಸಾವಲ್ಲೂ ಅಪ್ಪ- ಮಗ ಒಂದಾಗಿದ್ದಾರೆ. ತಂದೆ- ಮಗನ ಸಾವು ಕಂಡು ಕುಟುಂಬದವರ ದುಖಃ ಹೇಳತೀರದಾಗಿದೆ. ಸ್ಥಳೀಯರು ಕೂಡ ನೋವು ವ್ಯಕ್ತಪಡಿಸಿದರು.