ಹಾವೇರಿ: ಮಂಜುನಾಥ ನಗರದಲ್ಲಿ ಸೋಮವಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಚಾಲನೆ ನೀಡಿದರು. ಸಮೀಕ್ಷೆಯ ನೋಡಲ್ ಅಧಿಕಾರಿ ಸೈಯ್ಯದಾ ಆಫ್ರಿನ್‌ಬಾನು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸುಬ್ರಾ ನಾಯ್ಕ, ಬಿಇಒ ಎಂ.ಎಚ್.ಪಾಟೀಲ, ಇತರರಿದ್ದರು.