ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿಗೆ ಹಾವೇರಿ ಬಾಲಕರು ಆಯ್ಕೆ

Snehaloka
Published on

ಹಾವೇರಿ: ಇಲ್ಲಿನ ಸ್ನೇಹಲೋಕ ಕ್ರಿಕೆಟ್ ಸ್ಪೋಟ್ಸ್ ಕ್ಲಬ್‌ನ ಕ್ರೀಡಾಪಟುಗಳಾದ ಗಣೇಶ ಓಲೇಕಾರ ಹಾಗೂ ಅಕ್ಷಯ ಹಿರೇಮಠ ರಾಜ್ಯಮಟ್ಟದ ಲೆದರ್ ಬಾಲ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಹಾವೇರಿ ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ಇಬ್ಬರನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆ ಮೂಡಲಗಿಯಲ್ಲಿ ನಡೆಯುತ್ತಿರುವ ಟೂರ್ನಿಗೆ ಆಯ್ಕೆಯಾಗಿದ್ದು, ಈಗಾಗಲೇ ಒಂದು ಪಂದ್ಯದಲ್ಲಿ ವಿಜೇತರಾಗಿದ್ದಾರೆ.
ಗಣೇಶ ಹಾಗೂ ಅಕ್ಷಯಗೆ ತರಬೇತುದಾರರಾದ ಕೇಶವಕುಮಾರ ಚಾಂದ, ರಾಮು ಮಾಳಗಿ, ಅರುಣಕುಮಾರ ಶೆಟ್ಟರ್, ಮಾರುತಿ ಬಂಡಿವಡ್ಡರ, ಶಿವರಾಜ ಕಂಬಳಿ, ಮುತ್ತಪ್ಪ ಬಡಿಗೇರ, ವಸಂತ ರೇವಣಕರ ತರಬೇತಿ ನೀಡಿದ್ದರು ಎಂದು ಸ್ನೇಹಲೋಕ ಕ್ರಿಕೆಟ್ ಸ್ಪೋಟ್ಸ್ ಕ್ಲಬ್‌ನ ಅಧ್ಯಕ್ಷ ಪ್ರಕಾಶ ಉಜನಿಕೊಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net