ಪಿಯು ನೌಕರರ ಭವನದಲ್ಲಿ ಕಾಣಿಸಿಕೊಂಡ ನಾಗರಹಾವು; ಸ್ನೇಕ್ ರಮೇಶ ಅವರಿಂದ ರಕ್ಷಣೆ

16 HVR 4
Published on

ಹಾವೇರಿ: ಇಲ್ಲಿನ ದಾನೇಶ್ವರಿ ನಗರದ ಪದವಿ ಪೂರ್ವ ನೌಕರರ ಭವನದ ಕಟ್ಟಡದಲ್ಲಿ ಭಾನುವಾರ ಕಾಣಿಸಿಕೊಂಡಿದ್ದ ನಾಗರಹಾವನ್ನು ಉರಗ ರಕ್ಷಕ, ಸ್ನೇಕ್ ರಮೇಶ ಸುರಕ್ಷಿತವಾಗಿ ಹಿಡಿದು ಕರ್ಜಗಿ ಅರಣ್ಯ ಪ್ರದೇಶಕ್ಕೆ ಬಿಟ್ಟರು.

ಮಧ್ಯಾಹ್ನ ವೈಯಕ್ತಿಕ ಕೆಲಸದ ಮೇರೆಗೆ ಪದವಿ ಪೂರ್ವ ನೌಕರರ ಭವನಕ್ಕೆ ಬಂದಿದ್ದೆ. ಕಟ್ಟಡದ ಮೂಲೆಯಲ್ಲಿ ಏಳು ಅಡಿ ಉದ್ದದ ನಾಗರಹಾವು ಮಲಗಿದ್ದು ಗಮನಿಸಿದೆ. ಕೂಡಲೇ ಸ್ನೇಕ್ ರಮೇಶ ಅವರಿಗೆ ಕರೆ ಮಾಡಿದೆ. ತಕ್ಷಣ ಸ್ಥಳಕ್ಕೆ ಬಂದು ಹಾವು ಹಿಡಿದರು ಎಂದು ಸಾಕ್ಷ್ಯಚಿತ್ರ ನಿರ್ದೇಶಕ ಗೂಳಪ್ಪ ಅರಳಿಕಟ್ಟಿ ತಿಳಿಸಿದರು.

ಈ ವೇಳೆ ಮಾತನಾಡಿದ ರಮೇಶ, ಕಳೆದ 25 ವರ್ಷಗಳಿಂದ ಹಾವುಗಳನ್ನು ಹಿಡಿಯುತ್ತ ಬಂದಿರುವೆ. ಸಣ್ಣವನಿದ್ದಾಗಿನಿಂದಲೂ ಹವ್ಯಾಸ ಮಾಡಿಕೊಂಡಿರುವೆ. ಇದುವರೆಗೂ ಹದಿಮೂರೂವರೆ ಸಾವಿರ ಹಾವುಗಳನ್ನು ಹಾಗೂ ಇತರ ಸರಿಸೃಪಗಳನ್ನು ಹಿಡಿದಿರುವೆ. ನಾನು ಪೊಲೀಸ್ ಇಲಾಖೆಯಲ್ಲಿದ್ದು, ಈ ಕಾರ್ಯ ಮಾಡುತ್ತಿರುವೆ. ನಮ್ಮ ಇಲಾಖೆಯವರು ಸಹಕಾರ ನೀಡುತ್ತ ಬಂದಿದ್ದಾರೆ. ಹಾವು ಹಿಡಿಯುವ ನಮ್ಮ ಸುರಕ್ಷತೆ ಅತಿ ಮುಖ್ಯ. ಮಾದಕ ಪಾನೀಯಗಳನ್ನು ಸೇವಿಸಿ ಕೆಲವರು ಹಾವು ಹಿಡಿಯಲು ಉತ್ಸುಕರಾಗಿರುವುದು ಅಪಾಯಕಾರಿ. ಈ ಹಿನ್ನೆಲೆಯಲ್ಲಿ ಹಾವಿನ ಸುರಕ್ಷತೆ ಜೊತೆಗೆ ನಮ್ಮ ಸುರಕ್ಷತೆಯೂ ಅಷ್ಟೇ ಮುಖ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net