ರುದ್ರಭೂಮಿಯಲ್ಲಿ ಹರಿಶ್ಚಂದ್ರರ ಪ್ರತಿಮೆ ಸ್ಥಾಪಿಸಿ

22 HVR 5
Published on

ಹಾವೇರಿ: ಜಿಲ್ಲೆಯ ಎಲ್ಲ ಗ್ರಾಮಗಳ ಹಿಂದು ರುದ್ರಭೂಮಿಯಲ್ಲಿ ಸತ್ಯ ಹರಿಶ್ಚಂದ್ರ ಮಹಾರಾಜರ ಪ್ರತಿಮೆಗಳನ್ನು ಸ್ಥಾಪಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಅಧಿಜಾಂಭವ ಸಂಘದ ವತಿಯಿಂದ ಇಲ್ಲಿನ ಜಿಲ್ಲಾಡಳಿತ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳಲ್ಲಿ ರುದ್ರಭೂಮಿಗೆ ಶವಸಂಸ್ಕಾರ ಮಾಡುವ ವೀರಭಾವುಕ ಕೋಮಿಗೆ (ಹರಿಜನರು)ಸೇರಿದ 5 ಜನರ ಸಮಿತಿ ರಚನೆ ಮಾಡಬೇಕು. ಎಲ್ಲ ಕಡೆ ಹರಿಶ್ಚಂದ್ರರ ಮೂರ್ತಿ ಸ್ಥಾಪಿಸಬೇಕು. ಶವ ಸಂಸ್ಕಾರ ಮಾಡಲು ವಿಧಿವಿಧಾನ ಪ್ರಕಾರ ಶವಕ್ಕೆ ಮೋಕ್ಷ ಸಿಗಲು ಅನುಕೂಲವಾಗಲು ಧರ್ಮದತ್ತಿ ಇಲಾಖೆಗೆ ಶಿಪಾರಸ್ಸು ಮಾಡಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಅಧಿಜಾಂಭವ ಸಂಘದ ಪ್ರಧಾನ ಕಾರ್ಯದರ್ಶಿ, ಲಿಡಕರ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ, ಮಂಜುನಾಥ ಮಡಿವಾಳರ, ಅಲೆಮಾರಿ ಸಮುದಾಯಗಳ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ, ವಿಜಯಕುಮಾರ ಹುಲಿಕಂತಿಮಠ, ಸುರೇಶ ಹೊಸಮನಿ, ಮಂಜುನಾಥ ತಾಂಡೂರ, ಶಿವಬಸವ ಚೌಶೆಟ್ಟಿ, ನಿರಂಜನ ಬಳಿಗಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net