ವಿಶ್ವವನ್ನು ತಿಳಿಯುವ ಪ್ರಯತ್ನ ಆಕಾಶ ವೀಕ್ಷಣೆ

6 HVR 3 B
Published on

ಹಾವೇರಿ: ಆಕಾಶ ವೀಕ್ಷಣೆ ಎಂಬುದು ವಿಶ್ವವನ್ನು ತಿಳಿಯುವ ಪ್ರಯತ್ನ. ಬ್ರಹ್ಮಾಂಡದ ಬಗ್ಗೆ ನಮಗಿರುವ ಜ್ಞಾನವನ್ನು ವಿಸ್ತರಿಸುವುದೇ ಆಕಾಶ ವೀಕ್ಷಣೆಯ ಕಾರ್ಯ ಎಂದು ನಿವೃತ್ತ ವಿಜ್ಞಾನ ಶಿಕ್ಷಕ ಪಿ.ಬಿ ಮುದ್ದಿ ಹೇಳಿದರು.

ನಗರದ ಮುನಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಭಾರತ ವಿಜ್ಞಾನ ಸಮಿತಿ ವತಯಿಂದ ಇತ್ತೀಚೆಗೆ ಆಯೋಜಿಸಿದ್ದ ಆಕಾಶ ವೀಕ್ಷಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವ ಸದಾ ಕಾಲ ಹಿಗ್ಗುತ್ತಲೇ ಇರುತ್ತದೆ ಎಂಬ ಕಿವಿ ಮಾತೂ ಹೇಳಿದರು.

ಅಪರೂಪ ಎನ್ನುವಂತೆ ಏಕಕಾಲಕ್ಕೆ ಶುಕ್ರ, ಶನಿ, ಮಂಗಳ ಗ್ರಹಗಳು ಒಂದೇ ಸಾಲಿನಲ್ಲಿ ಕಾಣಿಸಿಕೊಂಡಿದ್ದನ್ನು ಕಣ್ತುಂಬಿಕೊಳ್ಳಲು, ಸೌರಮಂಡಲದ ಸೋಜಿಗವನ್ನು ನೋಡಲು ನೂರಾರು ನೋಡುಗರು ಬಂದಿದ್ದರು.

ಶಿಕ್ಷಕ ಮುದ್ದಿ ಅವರು ಸರದಿಯಲ್ಲಿ ನಿಂತು ವೀಕ್ಷಣೆಗೆ ಬಂದ ಹಿರಿ ಕಿರಿಯರಿಗೆ ಚಂದ್ರ ದರ್ಶನದ ಜತೆಗೆ ಶುಕ್ರ, ಶನಿ, ಮಂಗಳ ಗ್ರಹಗಳನ್ನು ಕಣ್ಣಂಚಿನಲ್ಲಿ ಕಾಣುವಂತೆ ಮಾಡಿದರು. ವೀಕ್ಷಕರಿಗೆ ಸಾಕಷ್ಟು ಮಾಹಿತಿಗಳನ್ನು ಸಮಾಧಾನದಿಂದ ತಮ್ಮ ಟೆಲಿಸ್ಕೋಪ್ ಮೂಲಕ ತೋರಿಸಿದರು.

ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಸವರಾಜ ಮಾತನಾಡಿ, ನೂರೈವತ್ತು ವರ್ಷಗಳಲ್ಲಿ ಸಂಭವಿಸುವ ಈ ಅಪರೂಪದ ಆಕಾಶ ವೀಕ್ಷಣೆ ನಮ್ಮ ಜೀವಿತಾವಧಿಯ ಅಮೂಲ್ಯ ಕ್ಷಣ ಎಂದರು.

ಸಾಹಿತಿ ಸತೀಶ ಕುಲಕರ್ಣಿ, ಡಾ.ವಿ.ಪಿ ದ್ಯಾಮಣ್ಣನವರ, ಎಸ್.ಬಿ ಅಣ್ಣಿಗೇರಿ, ವಿ.ಎಂ ಪತ್ರಿ, ಪಿ.ಬಿ ಭಾವನೂರ, ಇ.ಎಂ ಬಾಳಿಕಾಯಿ, ಡಿ.ಎಂ ಹಿರೇಮಠ, ಪ್ರೊ.ಶಿವನಗೌಡ ತಿಪ್ಪನಗೌಡ್ರ, ವಿದ್ಯಾ ಕಾಮತ, ಜುಬೇದಾ ನಾಯಕ್, ತೇಜಶ್ವಿನಿ ಕಾಶೆಟ್ಟಿ, ಡಾ.ಅಂಬಿಕಾ ಹಂಚಾಟೆ, ಸವಿತಾ ಮಣ್ಣಮ್ಮನವರ ಜತೆಗೆ ವಿ.ಎಸ್ ಹಂದ್ರಾಳ, ಪೃಥ್ವಿರಾಜ ಬೆಟಗೇರಿ, ನಾಗರಾಜ ಹುಡೇದ, ಚಂದ್ರಶೇಖರ ಶಿಶುನಳ್ಳಿ, ಶಿವಯೋಗಿ ಚರಂತಿಮಠ, ಇತರರು ಪಾಲ್ಗೊಂಡಿದ್ದರು.

ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಮಿತಿ ಸದಸ್ಯೆ ರೇಣುಕಾ ಗುಡಿಮನಿ ಪ್ರಸ್ತಾವಿಕ ನುಡಿಗಳನ್ನಾಡಿದು. ಪಲ್ಲವಿ ಗುಡಗೂರ ವಂದಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net