ಶಾಂತವೀರ ಪಟ್ಟಾಧ್ಯಕ್ಷರ 45ನೇ ಪುಣ್ಯ ಸ್ಮರಣೋತ್ಸವ ಫೆ.22ರಿಂದ 28ರವರೆಗೆ

Shantaveera Pattadhyaksharu Sindhagi matha
Published on

ಹಾವೇರಿ: ಇಲ್ಲಿನ ಪ್ರಸಿದ್ಧ ಸಿಂಧಗಿ ಮಠದ ಲಿಂ.ಶ್ರೀ ಶಾಂತವೀರ ಪಟ್ಟಾಧ್ಯಕ್ಷರ 45ನೇ ಪುಣ್ಯ ಸ್ಮರಣೋತ್ಸವ ಫೆ.22ರಿಂದ 28ರವರೆಗೆ ನಡೆಯಲಿದೆ.

ಫೆ.22ರಂದು ಸಂಜೆ 7.30ಕ್ಕೆ ಮಹೋತ್ಸವವನ್ನು ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಉದ್ಘಾಟಿಸುವರು. ಶೇಗುಣಸಿಯ ಶ್ರೀ ಡಾ.ಮಹಾಂತಪ್ರಭು ಸ್ವಾಮೀಜಿ ಅವರಿಂದ ಪ್ರತಿದಿನ ಸಂಜೆ ಶರಣರ ಜೀವನ ದರ್ಶನ ಪ್ರವಚನ ನಡೆಯಲಿದೆ. ಫೆ.24ರಂದು 10.30ಕ್ಕೆ ಉಚಿತ ನೇತ್ರ ತಪಾಸಣೆ ಶಿಬಿರ, ಫೆ.25ರಂದು ಬೆಳಗ್ಗೆ 10.30ಕ್ಕೆ ಉಚಿತ ಆರೋಗ್ಯ ತಪಾಸಣೆ ಶಿಬಿರ, ಫೆ.26ರಂದು ರಾತ್ರಿ 8.30ಕ್ಕೆ ಸಿಂಧಗಿ ಶ್ರೀಗಳ ಧ್ವನಿಸುರಳಿ ಬಿಡುಗಡೆ ನಡೆಯಲಿದೆ.

ಫೆ.28ರಂದು ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ನಡೆಯಲಿದೆ. ರಾತ್ರಿ 7.30ಕ್ಕೆ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಪ್ರವಚನ ಮಂಗಲ ಸಮಾರಂಭ ನಡೆಯಲಿದೆ. ಮಾ.8ರಂದು ರಾತ್ರಿ 7.30ಕ್ಕೆ ಊರ ಊಟ ಕಾರ್ಯಕ್ರಮ ನೆರವೇರಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net