ಸಾಯಿಬಾಬಾ ದೇಗುಲದಲ್ಲಿ ರಾಮನವಮಿ, ಸಾಯಿಬಾಬಾ ಜನ್ಮದಿನೋತ್ಸವ

17 HVR 5 B
Published on

ಹಾವೇರಿ: ಇಲ್ಲಿನ ಅಶ್ವಿನಿ ನಗರದ ಶಿರಡಿ ಸಾಯಿಬಾಬಾ ದೇಗುಲದಲ್ಲಿ ಬುಧವಾರ ಶ್ರೀರಾಮನವಮಿ ಹಾಗೂ ಶ್ರೀ ಶಿರಡಿ ಸಾಯಿಬಾಬಾ ಅವರ ಜನ್ಮದಿನೋತ್ಸವವನ್ನು ವಿಶೇಷ ಪೂಜೆ ಮೂಲಕ ಆಚರಿಸಲಾಯಿತು.
ಬೆಳಗ್ಗೆ ಬಾಬಾ ಮೂರ್ತಿಗೆ ಕಾಕಡಾರತಿ, ರುದ್ರಾಭಿಷೇಕ, ಸಾಯಿಬಾಬಾ ಹಾಗೂ ಶ್ರೀರಾಮ ದೇವರ ತೊಟ್ಟಿಲೋತ್ಸವ ಜರುಗಿತು. ನಂತರ ನೈವೇದ್ಯ ಆರತಿ, ಧೂಪಾರತಿ, ಸಾಯಿಬಾಬಾರ ಪಲ್ಲಕ್ಕಿ ಉತ್ಸವ ಜರುಗಿತು. ಕೊನೆಗೆ ಭಕ್ತರಿಗೆ ಕೋಸಂಬರಿ ಹಾಗೂ ಪಾನಕ ಪ್ರಸಾದ ವಿತರಿಸಲಾಯಿತು.

ಪ್ರೇಮಾ ಗೊಡಚಿ, ಅನಿತಾ ಶಿರೂರ, ಕುಸುಮಾ ಕನವಳ್ಳಿ, ರೇಣುಕಾ ಬಳಿಗಾರ, ನೇತ್ರಾವತಿ ಬೆಂಗಳೂರು, ಸುಶೀಲಾ ಕುಂಬಾರ, ಪುಷ್ಪಾ ಕುಂಬಾರ, ರಶ್ಮಿ ಎಂ., ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net