ಹಾವೇರಿ: ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ (ಡ್ಯಾಪ್ಕೋ)ದ ವತಿಯಿಂದ 2023-24 ನೇ ಸಾಲಿನ ಯುವಜನೋತ್ಸವ ಪ್ರಯುಕ್ತ ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಕಿರುಚಿತ್ರ (ರೀಲ್ ತಯಾರಿಕೆ) ಸ್ಫರ್ಧೆ ಏರ್ಪಡಿಸಲಾಗಿದೆ.
17ರಿಂದ 25 ವರ್ಷದೊಳಗಿನ ಕಾಲೇಜು ವಿದ್ಯಾರ್ಥಿಗಳು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರತಿ ಕಾಲೇಜಿನಿಂದ 20 ರಿಂದ 50 ವಿದ್ಯಾರ್ಥಿಗಳು ತಂಡವಾಗಿ ಭಾಗವಹಿಸಬೇಕು. ರೀಲ್ ತಯಾರಿಕೆ ವಿಡಿಯೋ 30 ಸೆಕೆಂಡ್‌ನಿಂದ 1 ನಿಮಿಷದ ಒಳಗೆ ಇರಬೇಕು. ಎಚ್.ಐ.ವಿ ಹರಡುವ ವಿಧಾನಗಳು, ಕಳಂಕ ಮತ್ತು ತಾರತಮ್ಯ, ನ್ಯಾಕೋ ಏಡ್ಸ್ ಆ್ಯಪ್, ಉಚಿತ ರಾಷ್ಟ್ರೀಯ ಸಹಾಯವಾಣಿ 1097, ಎಚ್.ಐ.ವಿ ಪರೀಕ್ಷೆಯ ಪ್ರಚಾರ ವಿಷಯಗಳ ಕುರಿತು ರೀಲ್ ತಯಾರಿಸಬೇಕು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ, ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯಲ್ಲ್ಲಿ ಅತ್ಯುತ್ತಮ ವಿಡಿಯೋ ತುಣುಕುಗಳನ್ನು ಆಯ್ಕೆ ಮಾಡಲಾಗುವುದು. ವಿಜೇತರ ಕಿರುಚಿತ್ರಗಳನ್ನು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆಂಕ್ಷನ್ ಸೊಸೈಟಿಯ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಲಾಗುವುದು. ಆಸಕ್ತ ವಿದ್ಯಾರ್ಥಿಗಳು ಪ್ರಾಚಾರ್ಯರ ದೃಢೀಕರಣ ಪತ್ರದೊಂದಿಗೆ ಕಿರುಚಿತ್ರವನ್ನು ಸೆ.25ರೊಳಗಾಗಿ ಡ್ಯಾಪ್ಕೋ ಕಚೇರಿಗೆ ತಲುಪಿಸಬೇಕು.