ಉಚಿತ ನೀಟ್, ಸಿಇಟಿ ತರಬೇತಿಗೆ ಅರ್ಹತಾ ಪರೀಕ್ಷೆ ನಾಳೆ

Shivalingeshwara Computers
Published on

ಹಾವೇರಿ: ನಗರದ ಶ್ರೀ ಶಿವಲಿಂಗೇಶ್ವರ ಕಂಪ್ಯೂಟರ್ಸ್‌ನ 25ನೇ ವರ್ಷದ ರಜತ ಮಹೊತ್ಸವದ ಅಂಗವಾಗಿ 25 ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಟ್, ಸಿಇಟಿ ತರಬೇತಿ ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ನೀಟ್ ಪರೀಕ್ಷೆ ಎದುರಿಸಿ ಅರ್ಹತೆ ಹೊಂದದೆ ಇರುವ ಮತ್ತು ಇತರ ಆಸಕ್ತ ವಿದ್ಯಾರ್ಥಿಗಳಿಗೆ ಸೆ.3ರಂದು ಅರ್ಹತಾ ಪರೀಕ್ಷೆ ಆಯೋಜಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಆಸಕ್ತ ವಿದ್ಯಾರ್ಥಿಗಳು ಸೆ.2ರ ಸಂಜೆ ಒಳಗಾಗಿ ಗುರುಭವನ ರಸ್ತೆಯ ಎಸ್‌ಎಸ್‌ಸಿ ನೆರಳು ಕಟ್ಟಡದಲ್ಲಿರುವ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ನೋಂದಣಿ ಮಾಡಿ ಅರ್ಹತಾ ಪರೀಕ್ಷೆಯ ಪ್ರವೇಶ ಪತ್ರ ತೆಗೆದುಕೊಳ್ಳಬಹುದು ಎಂದು ಸಂಸ್ಥೆಯ ಮುಖ್ಯಸ್ಥ ಸುರೇಶ ಮರಡಣ್ಣನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net