

ಹಾವೇರಿ: ಮಾಜಿ ವಿಧಾನ ಪರಿಷತ್ ಸದಸ್ಯ, ಶಿಗ್ಗಾಂವಿಯ ಸೋಮಣ್ಣ ಬೇವಿನಮರದ ಅವರಿಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ದೊರೆತಿದೆ.
ತೀವ್ರ ಕುತೂಹಲ ಮೂಡಿಸಿದ್ದ ಪ್ರಮುಖ ಕಾರ್ಯಕರ್ತರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಹಂಚಿಕೆ ಕಾರ್ಯಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದು, ಗುರುವಾರ ಮೊದಲ ಪಟ್ಟಿ ಬಿಡುಗಡೆಗೊಳಿಸಿದ್ದಾರೆ. ಜಿಲ್ಲೆಯಿಂದ ಸೋಮಣ್ಣ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಶಾಸಕರ ಪಟ್ಟಿಯಲ್ಲಿ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರಗೆ ಸ್ಥಾನ ನೀಡಲಾಗಿತ್ತು. ಕಾರ್ಯಕರ್ತರ ಪಟ್ಟಿಯಲ್ಲಿ ಬ್ಯಾಡಗಿಯ ಎಸ್.ಆರ್.ಪಾಟೀಲ, ಹಿರೇಕೆರೂರಿನ ಬಿ.ಎಚ್.ಬನ್ನಿಕೋಡ, ಹಾವೇರಿಯ ಎಂ.ಎಂ.ಹಿರೇಮಠ, ಸೋಮಣ್ಣ ಬೇವಿನಮರದ, ಮತ್ತಿತರರ ಹೆಸರು ಕೇಳಿ ಬಂದಿತ್ತು. ಇದೀಗ ಪಟ್ಟಿಯಲ್ಲಿ ಜಿಲ್ಲೆಯ ಏಕೈಕ ವ್ಯಕ್ತಿ ಸೋಮಣ್ಣಗೆ ಗಡಿ ಪ್ರಾಧಿಕಾರದ ಪಟ್ಟ ದೊರೆತಿದೆ. ಮತ್ತೆ ಯಾರಿಗೆ ಅವಕಾಶ ದೊರೆಯುತ್ತದೋ ಕಾದು ನೋಡಬೇಕಿದೆ.