ಶಿಗ್ಗಾವಿ: ನ್ಯಾಯಮೂರ್ತಿ ಕುನ್ನಾ ಅವರ ಬಗ್ಗೆ ಗೌರವವಿದೆ. ಅವರು ಸರ್ಕಾರದ ಏಜೆಂಟರಲ್ಲ ಎಂದಿದ್ದೇನೆ. ಅವರ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ. ಸರ್ಕಾರ ತರಾತುರಿಯಲ್ಲಿ ಯಡಿಯೂರಪ್ಪ ನವರಿಗೆ ನೋಟಿಸ್ ಕೊಟ್ಟಿದೆ. ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ ಎಂದಿದ್ದೇನೆ. ಯಡಿಯೂರಪ್ಪ ಅವರಂಥ ಹಿರಿಯರಿಗೆ ಮಾಹಿತಿ ನೀಡದೇ ಪ್ರಾಸಿಕ್ಯೂಶನ್‌ಗೆ ಕೊಡುತ್ತಾರೆ ಎಂದರೆ ಹೇಗೆ. ಏಕಪಕ್ಷೀಯವಾಗಿ ಮಾಡಿದ್ದಾರೆ. ಇದು ನಮ್ಮ ಪ್ರಶ್ನೆಯಾಘಿದೆ. ಆದರೂ ನ್ಯಾಯಮೂರ್ತಿ ಕುನ್ನಾ ಅವರಿಗೆ ಬೇಸರವಾಗಿದ್ದರೆ ವಿಷಾದ ವ್ಯಕ್ತಪಡಿಸುವೆ. ಜಮೀರ್ ಅವರಂತೆ ನಾನು ಬಂಡ ಅಲ್ಲ ಎಂದು ಪ್ರಲ್ಹಾದ ಜೋಶಿ ಹೇಳಿದರು.