ಮಡ್ಲಿ ಗ್ರಾಮದ ಸಾವಕ್ಕ ಓಲೇಕಾರಗೆ ಒಲಿದ ಜಾನಪದ ಅಕಾಡೆಮಿ ಪ್ರಶಸ್ತಿ

4 Savakka Olekar
Published on

ಹಾವೇರಿ: ಶಿಗ್ಗಾಂವಿ ತಾಲೂಕು ಮಡ್ಲಿ ಗ್ರಾಮದ 60 ವರ್ಷದ ಸಾವಕ್ಕ ಓಲೇಕಾರ ಅವರಿಗೆ ಸೋಬಾನೆ ಸಂಪ್ರದಾಯ ಪದ ವಿಭಾಗದಲ್ಲಿ ಜಾನಪದ ಅಕಾಡೆಮಿ ಪ್ರಶಸ್ತಿ ಒಲಿದು ಬಂದಿದೆ.

ಜೂನ್ 1, 1964ರಂದು ಕೋಣನಕೆರೆಯಲ್ಲಿ ಜನಿಸಿದ ಸಾವಕ್ಕ ಮೂರನೇ ತರಗತಿ ಕಲಿತಿದ್ದಾರೆ. ಹಲವು ವರ್ಷಗಳಿಂದ ಜಾನಪದ ಹಾಡುಗಳಿಗೆ ಧನಿಯಾಗುತ್ತಿದ್ದಾರೆ. ಶಿಗ್ಗಾಂವಿ ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯ, ರಂಭಾಪುರಿ ಮಹಾವಿದ್ಯಾಲಯ, ಹಾವೇರಿಯ ಜಿಎಚ್ ಕಾಲೇಜ್‌ನ ವಿದ್ಯಾರ್ಥಿಗಳಿಗೆ ಸಂಗೀತ ಪಾಠ ಹೇಳಿಕೊಟ್ಟಿದ್ದಾರೆ.

ಅಗಡಿ ತೋಟದಲ್ಲಿ 10 ವರ್ಷ ಜಾನಪದ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಸದ್ಯ ಗಂಗೆಬಾವಿ ರೆಸಾರ್ಟ್‌ನಲ್ಲಿ ಜಾನಪದ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಚನ್ನಪ್ಪ ಚನ್ನೆಗೌಡ ನೃತ್ಯ, ಬೀಸುಕಲ್ಲು ಗಾಯನ, ಆರತಿ ಹಾಡು, ಹೀಗೆ ಹತ್ತಾರು ಹಾಡು, ನೃತ್ಯದ ಮೂಲಕ ಗಮನ ಸೆಳೆದಿದ್ದಾರೆ ಸಾವಕ್ಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net