

ಶಿಗ್ಗಾಂವಿ: ಜವಾರಿ ಫುಡ್ ಪ್ರಾಡಕ್ಟ್ ಪ್ರೈ.ಲಿ. ವತಿಯಿಂದ ಉತ್ತರ ಕರ್ನಾಟಕದ ತಿಂಡಿ ತಿನಿಸುಗಳನ್ನು ಅಮೆರಿಕಾಗೆ ರಫ್ತು ಮಾಡುವ ಕಂಟೇನರ್‌ಗೆ ಡಿಸಿ ಡಾ.ವಿಜಯಮಹಾಂತೇಶ ದಾನಮ್ಮನವರ ಹಾಗೂ ಗಣ್ಯರು ಶುಕ್ರವಾರ ಹಸಿರುನಿಶಾನೆ ತೋರಿಸಿದರು. ಶ್ರೀ ಸಂಗನಬಸವ ಸ್ವಾಮೀಜಿ, ಸಂಸ್ಥೆಯ ಸಂಸ್ಥಾಪಕರಾದ ಶಿಲ್ಪಾ ಶಿವಲಿಂಗಪ್ಪ ಮಂಟಗಣಿ, ಚನ್ನಯ್ಯ ಎಮ್ಮೆಟ್ಟಿ ಹಿರೇಮಠ, ಕೆಪೆಕ್ ಅಧ್ಯಕ್ಷ ಬಿ.ಎಚ್ ಹರೀಶ, ಎಂ.ಎಚ್ ಬಂಥನಾಳ, ಜಂಟಿ ಕೃಷಿ ನಿರ್ದೇಶಕ ಡಾ.ಕೆ.ಮಲ್ಲಿಕಾರ್ಜುನ, ಕೈಗಾರಿಕೆ ಇಲಾಖೆ ಡಿಡಿ ಅಶೋಕ ಪ್ಯಾಟಿ, ಇತರರಿದ್ದರು.