ಜಾನಪದ ವಿವಿ ಘಟಿಕೋತ್ಸವದಲ್ಲಿ ನೂತನ ಶಾಸಕ ಪಠಾಣ ಟೀಂ ಗಲಾಟೆ..

2 HVR 1 A
Published on

ಹಾವೇರಿ/ ಶಿಗ್ಗಾಂವಿ: ಇಲ್ಲಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಘಟಿಕೋತ್ಸವದ ವೇದಿಕೆಗೆ ನನ್ನನ್ನು ಆಹ್ವಾನಿಸಿಲ್ಲ. ನಾನು ಬಂದರೂ ಯಾರೂ ಬಂದು ಸ್ವಾಗತಿಸಲಿಲ್ಲ ಎಂದು ಕ್ಯಾತೆ ತೆಗೆದ ನೂತನ ಶಾಸಕ ಯಾಸೀರ್ ಖಾನ್ ಪಠಾಣ ಹಾಗೂ ಬೆಂಬಲಿಗರು ವಿವಿ ಸಿಬ್ಬಂದಿ ಎಳೆದಾಡಿ ದುಂಡಾವರ್ತೆನೆ ತೋರಿದ್ದಾರೆ.

ಜಾನಪದ ವಿವಿ ಆವರಣದಲ್ಲಿ ವಿವಿ ನಿಯಮಾವಳಿ ಪ್ರಕಾರ ಘಟಿಕೋತ್ಸವ ಆಯೋಜಿಸಲಾಗಿತ್ತು. ಬೆಳಗ್ಗೆ ಜಾನಪದ ಶೈಲಿಯಲ್ಲಿ ಮೆರವಣಿ ಆರಂಭವಾಯಿತು. ಮೆರವಣಿಗೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಪಾಲ್ಲೊಂಡಿದ್ದರು. ಸ್ಥಳಕ್ಕೆ ಶಾಸಕ ಯಾಸೀರ್ ಖಾನ್ ಪಠಾಣ ಆಗಮಿಸಿ ಸಚಿವರನ್ನು ಭೇಟಿಯಾದರು. ನಂತರ ನಿಗದಿಯಂತೆ ವೇದಿಕೆ ಕಾರ್ಯಕ್ರಮ ಆರಂಭವಾಯಿತು.

ಈ ವೇಳೆ ಬೆಂಬಲಿಗರೊಂದಿಗೆ ಗುಂಪು ಸೇರಿ ಕುಲಪತಿ ಕಚೇರಿಗೆ ತೆರಳಿದ ಶಾಸಕರು ‘ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಕ್ಯಾಂಪಸ್‌ಗೆ ಬಮದರೂ ಯಾರೂ ಸ್ವಾಗತಿಸಲಿಲ್ಲ. ನಿಮಗೆ ಮುಂದೆ ಐತಿ, ಯುನಿವರ್ಸಿಟಿಯವರು ಇಲ್ಲಿ ಹೇಗೆ ಬದುಕುತ್ತಾರೆ ನೋಡ್ತಿನಿ’ ಎಂದು ಆವಾಜ್ ಬೆದರಿಕೆ ಹಾಕಿದರು.

ಅಲ್ಲದೇ ನಮ್ಮ ಶಾಸಕರ ಹೆಸರನ್ನು ಕಾರ್ಡ್‌ನಲ್ಲಿ ಹಾಕಿಲ್ಲ ಎಂದು ವಿವಿ ವಿರುದ್ಧ ಪಠಾಣ ಬೆಂಬಲಿಗರು ಧಿಕ್ಕಾರ ಕೂಗಿದರು. ಆಗ ವಿವಿಯ ಸಿಬ್ಬಂದಿಯನ್ನು ಎಳೆದಾಡಿದ ಶಾಸಕರ ಬೆಂಬಲಿಗರು ದರ್ಪ ತೋರಿದರು.

ಶಾಸಕರು ಘಟಿಕೋತ್ಸವದ ಶಿಷ್ಟಾಚಾರವನ್ನೇ ತಿಳಿದುಕೊಳ್ಳದೇ ಬಾಲಿಶವಾಗಿ ನಡೆದುಕೊಳ್ಳುತ್ತಿದ್ದಾರೆಂದು ವಿವಿ ಸಿಬ್ಬಂದಿಯೊಬ್ಬರು ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net