2.5 ಲಕ್ಷ ಮೌಲ್ಯದ ಚಿನ್ನದ ಸರ ಮರಳಿಸಿದ ಪ್ರಭು; ಹುಲಗೂರ ಗ್ರಾಮದಲ್ಲಿ ಪ್ರಾಮಾಣಿಕತೆ ಮೆರೆದ ಬೀಳಗಿ

31 HVR 11
Published on

ಹಾವೇರಿ: ಶಿಗ್ಗಾಂವಿ ತಾಲೂಕು ಹುಲಗೂರ ಗ್ರಾಮದ ಎಟಿಎಂ ಒಂದರ ಬಳಿ ಸಿಕ್ಕಿದ್ದ 2.50 ಲಕ್ಷ ರೂ. ಮೌಲ್ಯದ 25 ಗ್ರಾಂ ಚಿನ್ನದ ಸರವನ್ನು ಹುಲಗೂರ ಪೊಲೀಸ್ ಠಾಣೆಗೆ ಒಪ್ಪಿಸುವ ಮೂಲಕ ಗ್ರಾಮದ ಪ್ರಭು ಬಸವಣ್ಣೆಪ್ಪ ಬೀಳಗಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಬಸವನಾಳ ಗ್ರಾಮದ ಲಲಿತಾ ರುದ್ರಪ್ಪ ಒಡ್ಡಟ್ಟಿ ಎಂಬುವರು ಹುಲಗೂರ ಗ್ರಾಮದ ಎಟಿಎಂ ಬಳಿ ಚಿನ್ನದ ಸರ ಕಳೆದುಕೊಂಡಿದ್ದರು. ಮಧ್ಯಾಹ್ನ ಎಟಿಎಂ ಬಳಿ ಬಂದಿದ್ದ ಪ್ರಭು ಬೀಳಗಿ ಅವರಿಗೆ ಆ ಚೈನ್ ಸಿಕ್ಕಿತ್ತು. ಪ್ರಭು ಆ ಚೈನ್ ತೆಗೆದುಕೊಂಡು ಹೋಗಿ ಹುಲಗೂರ ಪೊಲೀಸ್ ಠಾಣೆಗೆ ಒಪ್ಪಿಸಿದರು.

ಹುಲಗೂರ ಠಾಣೆ ಪಿಎಸ್‌ಐ ಪರಶುರಾಮ ಕಟ್ಟಿಮನಿ ಹಾಗೂ ತಂಡ ಚೈನ್ ಕಳೆದುಕೊಂಡಿದ್ದ ಲಲಿತಾ ಅವರನ್ನು ಪತ್ತೆ ಮಾಡಿ, ಠಾಣೆಗೆ ಕರೆಸಿ ಪ್ರಭು ಅವರ ಸಮ್ಮುಖದಲ್ಲಿ ಲಲಿತಾ ಅವರಿಗೆ ಚೈನ್ ಒಪ್ಪಿಸಿದರು.

ತಾಯಿ- ಮಗನಿಗೆ ಸನ್ಮಾನ

ಲಕ್ಷಾಂತರ ರೂ. ಮೌಲ್ಯದ ಚಿನ್ನದ ಸರವನ್ನು ಕಳೆದುಕೊಂಡವರಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಪ್ರಭು ಹಾಗೂ ಅವರ ತಾಯಿ ರತ್ನಮ್ಮ ಬೀಳಗಿ ಅವರನ್ನು ಇಲಾಖೆ ಪರವಾಗಿ ಪಿಎಸ್‌ಐ ಪರಶುರಾಮ ಕಟ್ಟಿಮನಿ ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net