ದುಂಡಸಿ ಸುತ್ತಮುತ್ತ ಡಿ.5ರಂದು ವಿದ್ಯುತ್ ವ್ಯತ್ಯಯ

Power cutt
Published on

ಹಾವೇರಿ: ಶಿಗ್ಗಾಂವಿ ತಾಲೂಕಿನ ಅಡವಿಸೋಮಪುರ(ದುಂಡಸಿ) 110/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಡಿ.5ರಂದು ನಿರ್ವಹಣಾ ಕಾಮಗಾರಿ ಇರುವುದರಿಂದ ಈ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲ 11 ಕೆ.ವಿ. ಮಾರ್ಗಗಳಲ್ಲ್ಲಿ ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಅಡವಿ ಸೋಮಪುರ, ಕುನ್ನೂರು, ತರಲಘಟ್ಟ, ಮಮದಾಪುರ, ಶ್ಯಾಡಂಬಿ, ಹೊನ್ನಾಪುರ, ಮಡ್ಲಿ, ದುಂಡಸಿ ತಾಂಡಾ, ದುಂಡಸಿ, ಶೀಲವಂತ ಸೋಮಪುರ, ಪಿ.ಆರ್.ಎಸ್ ವಾಟರ್ ಪಾರ್ಕ್ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net