ಪೊಲೀಸ್ ಕಾನ್‌ಸ್ಟೆಬಲ್ ಸೇರಿ ಎಂಟು ಆರೋಪಿಗಳ ಬಂಧನ

Published on

ಶಿಗ್ಗಾಂವಿ: ಪಟ್ಟಣದ ಗುತ್ತಿಗೆದಾರ ಶಿವಾನಂದ ಕುನ್ನೂರು ಹತ್ಯೆ ಪ್ರಕರಣದ ಹತ್ಯೆಗೆ ಪ್ರತೀಕಾರ ತೀರಿಸಲು ಯತ್ನಿಸಿ, ಕೊಲೆ ಪ್ರಕರಣದ ಪ್ರಮುಖ ಆರೋಪಿ ನಾಗರಾಜ ಮನೆಗೆ ಬೆಂಕಿ ಹಚ್ಚಿದ ಕೇಸ್‌ನಲ್ಲಿ ಆರೋಪಿಯಾಗಿದ್ದ ಪೊಲೀಸ್ ಸಿಬ್ಬಂದಿ ಸೇರಿ ಎಂಟು ಜನ ಜೈಲು ಪಾಲಾಗಿದ್ದಾರೆ.

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೆಬಲ್ ಲಿಂಗರಾಜ ಕುನ್ನೂರ, ನವೀನ, ಸೇರಿ ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಾನಂದ ಕುನ್ನೂರ ಹತ್ಯೆಯಾದ ಬಳಿಕ ಆತನ ಸಹೋದರ ಲಿಂಗರಾಜ ಕುನ್ನೂರ ಕೊಲೆ ಆರೋಪಿ ನಾಗರಾಜನ ಮನೆಗೆ ಬೆಂಕಿ ಹಚ್ಚುವ ಪ್ರಕರಣದಲ್ಲಿ ಪ್ರಚೋದನೆ ನೀಡಿದ ಆರೋಪದಡಿ ಶಿಗ್ಗಾಂವಿ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net