

ಹಾವೇರಿ: ಶಿಗ್ಗಾಂವಿಯಲ್ಲಿ ಕೊನೆಗೂ ಅಲ್ಪಸಂಖ್ಯಾತರಿಗೆ ಮಣೆ ಹಾಕಿದ ಕಾಂಗ್ರೆಸ್. ಯಾಸೀರ್ ಅಹ್ಮದ್ ಖಾನ್ ಗೆ ಕಾಂಗ್ರೆಸ್ ಉಪಚುನಾವಣೆಯ ಟಿಕೆಟ್ ಘೋಷಿಸಿದ ಕಾಂಗ್ರೆಸ್ ಹೈಕಮಾಂಡ್.
ಕಳೆದ ಬಾರಿ ಬಸವರಾಜ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದ ಯಾಸೀರ್ ಖಾನ್ ಪಠಾಣಗೆ ಮತ್ತೆ ಅವಕಾಶ ನೀಡಿದ ಕಾಂಗ್ರೆಸ್. ಪಂಚಮಸಾಲಿ- ಅಲ್ಪಸಂಖ್ಯಾತರ ನಡುವಿನ ಪೈಪೋಟಿಯಲ್ಲಿ ಕೊನೆಗೆ ಅಲ್ಪಸಂಖ್ಯಾತರಿಗೆ ಮಣೆ ಹಾಕಿದ ಕೈಪಡೆ.
ಕಾಂಗ್ರೆಸ್ ಸತತವಾಗಿ ಆರನೇ ಬಾರಿಗೆ ಅಲ್ಪಸಂಖ್ಯಾತ ಅಸ್ತ್ರ ಪ್ರಯೋಗಿಸಿದ್ದು, ಐದು ಬಾರಿ ಸೋಲು ಕಂಡಿದ್ದಾರೆ. ಆರನೇ ಬಾರಿ ಅಲ್ಪಸಂಖ್ಯಾತ ಅಭ್ಯರ್ಥಿ ಬಿಜೆಪಿಯ ಭರತ ಬೊಮ್ಮಾಯಿ ವಿರುದ್ಧ ಕಣಕ್ಕೆ ಇಳಿದಿದ್ದಾರೆ.