ಬೊಮ್ಮನಹಳ್ಳಿ ಮನೆಯಲ್ಲಿ ಯಾಸೀರ್‌ಖಾನ್ ಪಠಾಣ ರಿಲ್ಯಾಕ್ಸ್

14 HVR 7 B
Published on

ಹಾವೇರಿ: ಉಪ ಚುನಾವಣೆ ಪ್ರಚಾರ ಭರಾಟೆಯಲ್ಲಿ ತೊಡಗಿದ್ದ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್‌ಖಾನ್ ಪಠಾಣ ಮತದಾನ ಮುಗಿಯುತ್ತುದ್ದಂತೆ ಗುರುವಾರ ಬೊಮ್ಮನಹಳ್ಳಿಯ ನಿವಾಸದಲ್ಲಿ ರಿಲ್ಯಾಕ್ಸ್ ಮೂಡ್‌ಗೆ ತೆರಳಿದ್ದರು.

ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು. ಮತಗಟ್ಟೆವಾರು ಮಾಹಿತಿ ಪಡೆದುಕೊಂಡು, ಸ್ನೇಹಿತರು ಹಾಗೂ ಕುಟುಂಬದವರ ಜತೆಗೆ ಸಮಯ ಕಳೆದರು. ಕ್ಷೇತ್ರದ ಜನ ಬದಲಾವಣೆ ಬಯಸಿದ್ದಾರೆ. ಕಳೆದ ಬಾರಿಯಷ್ಟೇ ಈ ಬಾರಿಯೂ ಮತದಾನವಾಗಿದೆ. ಆದರೆ, ಫಲಿತಾಂಶ ಮಾತ್ರ ಉಲ್ಟಾ ಆಗುತ್ತದೆ. ಗೆಲುವು ನಮ್ಮದೇ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net