ಹಾವೇರಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಅಂಗವಾಗಿ ತರಬೇತಿ, ಮಸ್ಟರಿಂಗ್- ಡಿ ಮಸ್ಟರಿಂಗ್, ಮತಗಟ್ಟೆ ಸ್ಥಾಪಿಸುವ ಸರ್ಕಾರಿ ಕಚೇರಿ, ಶಾಲೆಗಳಿಗೆ ಹಾಗೂ ಮತ ಎಣಿಕೆ ಕೇಂದ್ರಕ್ಕೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಆದೇಶ ಹೊರಡಿಸಿದ್ದಾರೆ.
ತರಬೇತಿ, ಮಸ್ಟರಿಂಗ್-ಡಿ ಮಸ್ಟರಿಂಗ್ ನಡೆಯುವ ಶಿಗ್ಗಾಂವಿ ಜೆ.ಎಂ.ಜೆ.ಹೈಸ್ಕೂಲಿಗೆ ನ.7 ಹಾಗೂ ನ.12, ನ.13ರಂದು, ಮತದಾನಕ್ಕೆ ಮತಗಟ್ಟೆಗಳನ್ನು ಸ್ಥಾಪಿಸಿದ ಸರ್ಕಾರಿ ಕಚೇರಿಗಳಿಗೆ ಹಾಗೂ ಶಾಲೆಗಳಿಗೆ ನ.12ರಿಂದ ನ.13ರವರೆಗೆ ಹಾಗೂ ಮತ ಎಣಿಕೆ ಕೇಂದ್ರ ಸ್ಥಾಪಿಸಲಾದ ದೇವಗಿರಿ ಸರ್ಕಾರಿ ಇಂಜನಿಯರಿಂಗ್ ಕಾಲೇಜ್‌ಗೆ ನ.23ರಂದು ರಜೆ ಘೋಷಣೆ ಮಾಡಿ ಆದೇಶ ಹೊರಡಿಸಲಾಗಿದೆ. ಈ ಮೇಲಿನ ರಜಾ ದಿನಗಳನ್ನು ಮುಂದಿನ ದಿನ ಸರ್ಕಾರಿ ರಜೆ ದಿನಗಳಲ್ಲಿ ಹೊಂದಾಣಿಕೆ ಮಾಡಿ ತರಗತಿಗಳನ್ನು ನಡೆಸಲು ಕ್ರಮ ಕೈಗೊಳ್ಳಲು ಡಿಸಿ ಸೂಚನೆ ನೀಡಿದ್ದಾರೆ.