ಶಿಗ್ಗಾಂವಿ: ಉಪಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಮಾಜಿ ಶಾಸಕ ಸೈಯದ್ ಅಜ್ಜಂಪೀರ್ ಖಾದ್ರಿ, ಯಾಸೀರ್‌ಖಾನ್ ಪಠಾಣ, ಸೇರಿ 13 ಪ್ರಬಲ ಆಕಾಂಕ್ಷಿಗಳಿದ್ದರು. ವಿನಯ ಕುಲಕರ್ಣಿ ಪುತ್ರಿ ವೈಶಾಲಿ ಹೆಸರು ಕೊನೆಯಲ್ಲಿ ಕೇಳಿ ಬಂದಿತ್ತು. ಅಂತಿಮವಾಗಿ ಯಾಸೀರ್ ಖಾನ್ ಪಠಾಣ ಹೆಸರನ್ನು ಹೈಕಮಾಂಡ್ ಆಯ್ಕೆ ಮಾಡಿದೆ. ಹಾಗಾಗಿ, ಸಹಜವಾಗಿ ಬಂಡಾಯ ಭೀತಿ ಕೈಪಡೆಗೆ ಎದುರಾಗಿದೆ. ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಖಾದ್ರಿ ಬೆಂಬಲಿಗರ ಸಭೆ ಕರೆದಿದ್ದಾರೆ.