ಶಿಗ್ಗಾಂವಿ ಟಿಕೆಟ್ ಗಾಗಿ ಸಚಿವ ಜಾರಕಿಹೊಳಿ ಕಾರಿಗೆ ಮುತ್ತಿಗೆ; ಯಾಸೀರ್ ಖಾನ್ ಪಠಾಣ್ ಹಾಗೂ ಅಜ್ಜಂಪೀರ್ ಖಾದ್ರಿ ಶಕ್ತಿ ಪ್ರದರ್ಶನ; ಕೈಕಟ್ಟಿ ನಿಂತ ಸಚಿವರು

Shiggavi Ticket fight
Published on

ಹಾವೇರಿ: ಶಿಗ್ಗಾಂವಿಗೆ ಸಚಿವ ಸತೀಶ ಜಾರಕಿಹೊಳಿ ಬರುತ್ತಿದ್ದಂತೆಯೇ ಅವರ ಕಾರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದರು.

ಶಿಗ್ಗಾoವಿ ಪಟ್ಟಣದ ಐಬಿ ಮುಂಭಾಗ ಮುತ್ತಿಗೆ ಹಾಕಿದ ಖಾದ್ರಿ ಬೆಂಬಲಿಗರು

ಮಾಜಿ ಶಾಸಕ ಸೈಯದ್ ಅಜ್ಜಂಪೀರ್ ಖಾದ್ರಿ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ

ಮುಂದಿನ ಸಿಎಂ ಸತೀಶ ಜಾರಕಿಹೊಳಿ ಎಂದು ಘೋಷಣೆ ಹಾಕಿ ಮುತ್ತಿಗೆ

ಕಾರು ಬಿಡದ ಘೋಷಣೆ ಕೂಗಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಖಾದ್ರಿ ಬೆಂಬಲಿಗರು

ಮುಂದಿನ ಸಿಎಂ ಎನ್ನುತ್ತಿದ್ದಂತೆಯೆ ನಸುನಕ್ಕ ಸತೀಶ್ ಜಾರಕಿಹೊಳಿ

ಸಚಿವರ ಎದುರೆ ಖಾದ್ರಿ ಖಾದ್ರಿ ಎಂದು ಕೂಗಾಟ

ಖಾದ್ರಿ ಮೇಲೆತ್ತಿ ಟಿಕೆಟ್ ಕೊಡುವಂತೆ ಒತ್ತಾಯ ಮಾಡಿದ ನೂರಾರು ಬೆಂಬಲಿಗರು.

ನಡು ರಸ್ತೆಯಲ್ಲೆ ಅಭಿಪ್ರಾಯ ಸಂಗ್ರಹಿಸಿ ಎಂದು ಬಿಗಿಪಟ್ಟು.

ಶಿಗ್ಗಾವಿ-ಸವಣೂರು ಬೈ ಎಲೆಕ್ಷನ್ ಹಿನ್ನಲೆ

ಚುನಾವಣಾ ಉಸ್ತುವಾರಿ ವಹಿಸಿರುವ ಸಚಿವ ಸತೀಶ ಜಾರಕಿಹೊಳಿ ಇಂದು ಶಿಗ್ಗಾವಿಗೆ ಭೇಟಿ ನಿಮಿತ್ತ

ಪಟ್ಟಣದ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಸಚಿವ ಸತೀಶ ಜಾರಕಿಹೊಳಿ

ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆಗೆ ಆಗಮನ

ಈ ಹಿನ್ನಲೆ ಕಾಂಗ್ರೆಸ್ ಟಿಕೆಟ್ ಗಾಗಿ ಶುರುವಾದ ಪ್ಲೆಕ್ಸ್ ಪೈಟ್

ಸತೀಶ್ ಜಾರಕಿಹೊಳಿ ಮುಂದೆ ಬಲ ತೋರಿಸಲು ಸ್ವಪಕ್ಷದಲ್ಲೆ ಪೈಟ್

ಪ್ರಬಲ ಆಕಾಂಕ್ಷಿಗಳಾಗಿರುವ ಯಾಸೀರ್ ಖಾನ್ ಪಠಾಣ್ ಹಾಗೂ ಅಜ್ಜಂಪೀರ್ ಖಾದ್ರಿ

ನಾ ಮುಂದು ತಾ ಮುಂದು ಎಂಬಂತೆ ಪ್ಲೆಕ್ಸ್ ಹಾಕಿಸಿ ಶಕ್ತಿ ಪ್ರದರ್ಶನ

ಜಮಾವಣೆಯಾದ ಇಬ್ಬರು ಆಕಾಂಕ್ಷಿಗಳ ಅಭಿಮಾನಿಗಳು ಹಾಗೂ ಬೆಂಬಲಿಗರು

ಸುಮಾರು 200 ಕ್ಕೂ ಹೆಚ್ಚು ಜನರು ಆಗಮನ

ವಾಗ್ವಾದ ಹಾಗೂ ಜಗಳವಾಗುವ ಸಂಬವ ಹಿನ್ನಲೆ

ಮುಂಜಾಗ್ರತಾ ಕ್ರಮವಾಗಿ ಶಿಗ್ಗಾವಿ ಪೋಲಿಸಿಂದ ಬಂದೊಬಸ್ತ್

ಡಿ ಆರ್ ವಾಹನ ನಿಲ್ಲಿಸಿ ಪೋಲಿಸರ ನಿಯೋಜಿಸಿದ ಇಲಾಖೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net