ಸ್ಥಳೀಯರಿಗೆ ಅವಕಾಶ ಕೊಡಬೇಕು; ಡಾ ಫಕೀರಗೌಡ ಪಾಟೀಲ

Dr.Fakirgouda Patil
Published on

ಶಿಗ್ಗಾಂವಿ: ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷವಿರಲಿ ಚುನಾವಣೆ ಸಂದರ್ಭದಲ್ಲಿ ಸ್ಥಳೀಯರಿಗೆ ಹಾಗೂ ಸ್ಥಳೀಯ ಕಾರ್ಯಕರ್ತರಿಗೆ ಅವಕಾಶ ಕೊಡಬೇಕು. ಹಗಲು, ರಾತ್ರಿ ದುಡಿದಂಥ ಕಾರ್ಯಕರ್ತರನ್ನು ಬಿಟ್ಟು, ಬೇರೆಯವರಿಗೆ ಅವಕಾಶ ಕೊಟ್ಟರೆ, ಕಾರ್ಯಕರ್ತರ ಹಾಗೂ ಸ್ಥಳೀಯರ ಉತ್ಸಾಹ ಕುಂದುತ್ತದೆ ಎಂದು ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ ಫಕೀರಗೌಡ ಪಾಟೀಲ ಅಸಮಾಧಾನ ಹೊರ ಹಾಕಿದ್ದಾರೆ.

ಪಕ್ಷಪರ ಅಭಿಮಾನಕ್ಕೆ ಧಕ್ಕೆ ಉಂಟಾಗಿದೆ. ಶಾಸಕ ಪದವಿಯು, ತಾಲೂಕಿನ ಉನ್ನತ ಹುದ್ದೆಯಾಗಿದೆ. ಅದು ತಾಲೂಕಿನವರಿಗೆ ಸೀಮಿತವಾಗಿರಬೇಕೆ ಹೊರತು ಬೇರೆಯವರ ಪಾಲಾಗಬಾರದು. ಹಣಬಲ ಇದ್ದವರು ಎಲ್ಲಾದರೂ ನಿಂತು ಗೆಲ್ಲಬಹುದು. ಅಂಥವರು ನಮ್ಮ ತಾಲೂಕಿಗೆ ಬಂದು ತೊಂದರೆ ಕೊಡುವುದು ಸರಿಯಲ್ಲ. ರಾಷ್ಟ್ರೀಯ ಪಕ್ಷದವರು ಇನ್ನುಮುಂದೆಯಾದರೂ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net