

ಹಾವೇರಿ/ ಶಿಗ್ಗಾಂವಿ: ಉಪ ಚುನಾವಣೆ ಪ್ರಚಾರ ಕಾರ್ಯದಲ್ಲಿ ಬಿಡುವಿಲ್ಲದೇ ಓಡಾಡಿ ಸುಸ್ತಾಗಿರುವ ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್‌ಖಾನ್ ಪಠಾಣ ಗುರುವಾರ ವಿಶ್ರಾಂತಿ ಮೂಡ್‌ನಲ್ಲಿದ್ದರು.
ಭರತ ಬೊಮ್ಮಾಯಿ ಬೆಳಗ್ಗೆ ಹನಮರಹಳ್ಳಿ ಗ್ರಾಮದ ಬಳಿ ಪ್ರಭಂಜನ ಗಾರ್ಮೇಂಟ್ಸ್‌ಗೆ ಭೇಟಿ ನೀಡಿ ಅಲ್ಲಿಯ ಸಿಬ್ಬಂದಿ ಜತೆಗೆ ಮಾತನಾಡಿದರು. ನಂತರ ರಾಣೆಬೆನ್ನೂರ ತಾಲೂಕಿನ ಗುಡ್ಡದ ಆನ್ವೇರಿ ಬಳಿಯ ಸ್ಟೋನ್ ಕ್ರಶರ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು, ಶುಭ ಕೋರಿದರು.