ಅಂತರ್ ಜಿಲ್ಲಾ ಇಸ್ಪೀಟ್ ಜೂಜುಕೋರರ ಬಂಧನ

Published on

ಶಿಗ್ಗಾಂವಿ: ತಾಲೂಕಿನ ಶಿಡ್ಲಾಪುರ ಕ್ರಾಸ್ ಬಳಿ ಇಸ್ಪೀಟ್ ಆಡುತ್ತಿದ್ದ ಅಂತರ್ ಜಿಲ್ಲಾ ಇಸ್ಪೀಟ್ ಜೂಜುಕೋರರ ಅಡ್ಡೆ ಮೇಲೆ ಶುಕ್ರವಾರ ದಾಳಿ ನಡೆಸಿದ ಬಂಕಾಪುರ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಈಶ್ವರ ಮಾಸ್ತಪ್ಪ ನಾಯ್ಕ, ಸಿದ್ದಾಪುರ ತಾಲೂಕು ತೇಗಲಿ ಗ್ರಾಮದ ಮಂಜುನಾಥ ತೇಗಲಿ ಹಾಗೂ ಬಿಲಕಣಕಿ ಗ್ರಾಮದ ಸಂಜೀವ ಚನ್ನಯ್ಯ ಬಂಧಿತರು. ಆರೋಪಿತರಿಂದ 1,950 ನಗದು. ಎರಡು ಕಾರು, ನಾಲ್ಕು ಮೊಬೈಲ್ ಜಪ್ತಿ ಮಾಡಿದ್ದಾರೆ. ಶಿಗ್ಗಾಂವಿ ಸಿಪಿಐ ಅನಿಲಕುಮಾರ ರಾಠೋಡ, ಪಿಎಸ್‌ಐ ನಿಂಗಪ್ಪ ಕರಕಣ್ಣನವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net