ಆರು ಅಭ್ಯರ್ಥಿಗಳಿಂದ 8 ನಾಮಪತ್ರ ಸಲ್ಲಿಕೆ

Published on

ಹಾವೇರಿ: ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆಗೆ ಶಿಗ್ಗಾಂವಿ ತಹಸೀಲ್ದಾರ್ ಕಚೇರಿಯಲ್ಲಿ ಸವಣೂರ ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ಮಹ್ಮದ್ ಖಿಜರ್ ಅವರಿಗೆ ಗುರುವಾರ ಆರು ಅಭ್ಯರ್ಥಿಗಳು ಎಂಟು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಭಾರತೀಯ ಜನತಾ ಪಾರ್ಟಿಯಿಂದ ಭರತ ಬೊಮ್ಮಾಯಿ ಎರಡು, ಪಕ್ಷೇತರ ಅಭ್ಯರ್ಥಿಗಳಾದ ವೀರಯ್ಯ ಓದಿಸುವಮಠ ಎರಡು, ಸೋಸಿಯಾಲಿಸ್ಟ್ ಪಾರ್ಟಿಯಿಂದ ಖಾಜಾಮೋಹಿದ್ದಿನ ಗುಡಗೇರಿ, ಪಕ್ಷೇತರರಾಗಿ ಗುರಪ್ಪ ಇಮ್ರಾಪುರ, ಶಿವಪುತ್ರಪ್ಪ ಪಾಟೀಲ ಹಾಗೂ ಗುರುಸಿದ್ದಗೌಡ ದ್ಯಾಮನಗೌಡ ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.

ಇಂದು ಕೊನೆ:

ಈವರೆಗೆ 11 ಅಭ್ಯರ್ಥಿಗಳಿಂದ 21 ನಾಮಪತ್ರ ಸಲ್ಲಿಕೆಯಾಗಿವೆ. ಅ.25ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಅ.28ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ ಹಾಗೂ ಅ.30 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net