

ಹಾವೇರಿ: ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆಗೆ ಶುಕ್ರವಾರ ಒಂದೇ ದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆ ದಿನಾಂಕ ಮುಕ್ತಾಯಗೊಂಡಿದ್ದು, ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ ಸಲ್ಲಿಕೆಯಾಗಿವೆ.
ಶುಕ್ರವಾರ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನಿಂದ ಯಾಸಿರ್ ಅಹ್ಮದಖಾನ್ ಪಠಾಣ ನಾಲ್ಕು, ಭಾರತೀಯ ಜನತಾ ಪಾರ್ಟಿಯಿಂದ ಭರತ ಬೊಮ್ಮಾಯಿ ಎರಡು, ಪಕ್ಷೇತರವಾಗಿ ಸೈಯದ್ ಅಜೀಮಪೀರ್ ಖಾದ್ರಿ ಎರಡು, ಕರ್ನಾಟಕ ರಾಷ್ಟ್ರ ಸಮಿತಿಯಿಂದ ರವಿ ಕೃಷ್ಣಾರೆಡ್ಡಿ, ಇಂಡಿಯನ್ ಪೊಲಿಟಿಕಲ್ ಕಾಂಗ್ರೆಸ್‌ನಿಂದ ಮಕ್ತುಮಸಾಬ ಮುಲ್ಲಾ, ಉತ್ತಮ ಪ್ರಜಾಕೀಯ ಪಕ್ಷದಿಂದ ಸಚಿನಕುಮಾರ ಕರ್ಜೇಕಣ್ಣನವರ, ಟಿಪ್ಪು ಸುಲ್ತಾನ ಪಾರ್ಟಿಯಿಂದ ಶೌಖತಅಲಿ ಬಂಕಾಪೂರ, ಪಕ್ಷೇತರರಾಗಿ ರಾಜು ನಾಯಕವಾಡಿ, ಶಂಕ್ರಪ್ಪ ಹುಲಸೋಗಿ, ಜಿತೇಂದ್ರ ಕನವಳ್ಳಿ, ಶಾಮಾಚಾರಿ ಕಮ್ಮಾರ, ಉಮೇಶ ದೈವಜ್ಞ, ಸಿದ್ದಪ್ಪ ಹೊಸಳ್ಳಿ, ಜಿ.ಅಂಜನಕುಮಾರ, ಗುರುಸಿದ್ದಗೌಡ ದ್ಯಾವನಗೌಡ್ರ, ಮಂಜುನಾಥ ಕುನ್ನೂರ, ಲಾಲಸಾಬ ನದಾಫ, ಅಂಬ್ರೋಸ್ ಮೆಲ್ಲೊ, ನಬಿಸಾಬ ಮೆಳ್ಳಗಟ್ಟಿ ಹಾಗೂ ಸಾತಪ್ಪ ದೇಸಾಯಿ ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.
ಶಿಗ್ಗಾಂವಿ ತಹಸೀಲ್ದಾರ್ ಕಚೇರಿಯಲ್ಲಿ ಸವಣೂರ ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ಮಹ್ಮದ್ ಖಿಜರ್ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಸಹಾಯಕ ಚುನಾವಣಾಧಿಕಾರಿ ಸಂತೋಷ ಹಿರೇಮಠ ಇದ್ದರು.
ನಾಮಪತ್ರ ವಾಪಸ್‌ಗೆ 30 ಕೊನೆ ದಿನ
ನಾಮಪತ್ರ ಸಲ್ಲಿಕೆ ಅವಧಿ ಪೂರ್ಣಗೊಂಡಿದ್ದು, ಅ.28ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಅ.30 ಕೊನೆಯ ದಿನಾಂಕವಾಗಿದೆ.