ಬಣಜಿಗ ಸಂಘದಿಂದ ಮಹತ್ಕಾರ್ಯಗಳು ನಡೆಯಲಿ; ಶಹರ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಸಂಸದ ಜಗದೀಶ ಶೆಟ್ಟರ್ ಸಲಹೆ

30 HVR 12
Published on

ಹಾವೇರಿ: ಲಿಂಗಾಯತ ಬಣಜಿಗ ಸಮಾಜದ ಮಕ್ಕಳ ವಿದ್ಯಾಭ್ಯಾಸ, ಸಮುದಾಯಕ್ಕೆ ಅಗತ್ಯವಿರುವ ನ್ಯಾಯಯುತ ಬೇಡಿಕೆಗಳ ಈಡೇರಿಸಿಕೊಳ್ಳಲು ಹಾವೇರಿ ನಗರದಲ್ಲಿ ಬಣಜಿಗ ಸಮಾಜವು ಸಂಘಟಿತರಾಗಿರುವುದು ಸ್ವಾಗತಾರ್ಹ. ಈ ಸಂಘದ ಮುಖೇನ ಕಾಲಕಾಲಕ್ಕೆ ರಚನಾತ್ಮಕ ಕಾರ್ಯಗಳು, ಮಹತ್ಕಾರ್ಯಗಳು ನಿರಂತರವಾಗಿ ನಡೆಯುತ್ತಿರಲಿ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಲಹೆ ನೀಡಿದರು.

ನಗರದ ರಜನಿ ಕನ್ವೆನ್ಷನ್ ಹಾಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಹಾವೇರಿ ಶಹರ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಬಣಜಿಗ ಸಮಾಜ ಉಜ್ವಲ ಪರಂಪರೆ ಮತ್ತು ವಿಶಿಷ್ಟವಾದ ಇತಿಹಾಸ ಹೊಂದಿದೆ. ಪ್ರಸ್ತುತ ಎಲ್ಲ ಜಾತಿಯ ಒಳಪಂಗಡಗಳು ತಮ್ಮ ಪಂಗಡದ ಸಂಘಗಳನ್ನು ರಚಿಸಿಕೊಂಡು ಅವರ ಒಳಿತಿಗಾಗಿ ಪ್ರಯತ್ನಿಸುತ್ತಿವೆ. ಬಣಜಿಗ ಸಮಾಜವು ಲಿಂಗಾಯತ ಇತರ ಒಳಪಂಗಡಗಳ ಹಾಗೂ ಇತರ ಜಾತಿ-ಧರ್ಮಗಳ ಜತೆಗೆ ಉತ್ತಮ ಹಾಗೂ ಸೌಹಾರ್ದಯುತ ಬಾಂಧವ್ಯವನ್ನು ಇರಿಸಿಕೊಂಡು ಸಾಮರಸ್ಯದಿಂದ ಬದುಕುವ ಸಮಾಜವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಗೌರವಾಧ್ಯಕ್ಷ ಅಜಿತ ಮಾಗಾವಿ ಮಾತನಾಡಿ, ಎಲ್ಲ ಸಮಾಜಗಳೊಂದಿಗೆ ಸಾಮರಸ್ಯ ಹೊಂದಿ, ಬಣಜಿಗ ಸಮಾಜ ಬಾಂಧವರನ್ನು ಸಂಘಟಿಸಿ, ಸಮಾಜದ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದು ಸಂಘದ ಮೂಲ ಉದ್ದೇಶ. ಎಲ್ಲರ ಸಹಕಾರ ಮಾರ್ಗದರ್ಶನ ಅವಶ್ಯಕ ಎಂದರು.

ಸಂಘದ ಉಪಾಧ್ಯಕ್ಷ ಕೆ.ಸಿ ಪಾವಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಹಾವೇರಿ ನಗರದ ಎಲ್ಲ ವಾರ್ಡ್‌ನಲ್ಲಿ ಸದಸ್ಯತ್ವ ಅಭಿಯಾನ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮಕ್ಕಳಿಗೆ ಶಿಕ್ಷಣ ಹಾಗೂ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಚಿಂತನೆ ನಡೆದಿದೆ ಎಂದರು.

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಕಿರಣ ಕೊಳ್ಳಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಗದೀಶ ಮಾಗಾವಿ, ವಿ.ಜಿ ಯಳಗೇರಿ, ಸದಾಶಿವ ಹಿಂಚಿಗೇರಿ, ಗದಿಗೆಪ್ಪ ನೆಲೋಗಲ್ಲ, ಮುರುಗೇಶ ಗೋಕಾವಿ, ಬಸವರಾಜ ತುಪ್ಪದ, ಶಿವರಾಜ ಹೆರೂರ, ಶಿವಯೋಗಿ ಮಾಮಲೆಪಟ್ಟಣಶೆಟ್ಟಿ, ಬಸವರಾಜ ಯಲವತ್ತಿ, ರಾಜು ಕೊರಿಶೆಟ್ಟರ್, ಶಿವಯೋಗಿ ಅಂಗಡಿ, ಅಶೋಕ ಮಹಾರಾಜಪೇಟ, ಗಣೇಶ ಮುಷ್ಟಿ, ಪ್ರವೀಣ ಕೊಳ್ಳಿ, ಕುಮಾರ ಹತ್ತಿ, ಮಂಜುನಾಥ ಅಂಗಡಿ, ಶಿವಕುಮಾರ ಬೆಲ್ಲದ, ಮುತ್ತು ಬೆಳ್ಳಟ್ಟಿ, ಶಂಭು ಹತ್ತಿ, ಶಿವರುದ್ರ ಅಂಗಡಿ, ಮೀನಾಕ್ಷಿ ಮಾಗಾವಿ, ಮಮತಾ ಬಾಲೇಹೊಸೂರ, ರೇಷ್ಮಾ ಮುಷ್ಠಿ, ಲಲಿತಕ್ಕ ಹೊರಡಿ, ವಿಮಲಾ ಮರ್ತೂರ, ಮತ್ತಿತರರು ಉಪಸ್ಥಿತರಿದ್ದರು.

ಅಕ್ಷರಾ ಮುಳಗುಂದ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಹಿಂಚಿಗೇರಿ ನಿರೂಪಿಸಿದರು. ಬಸವರಾಜ ಕೋರಿ ವಂದಿಸಿದರು.

ಪದಾಧಿಕಾರಿಗಳ ವಿವರ

ಪದಗ್ರಹಣ ಸಮಾರಂಭದಲ್ಲಿ ಬಣಜಿಗ ಶಹರ ಘಟಕಕ್ಕೆ ಗೌರವ ಅಧ್ಯಕ್ಷರಾಗಿ ಅಜಿತ ಮಾಗಾವಿ, ಅಧ್ಯಕ್ಷರಾಗಿ ಕಿರಣ ಕೊಳ್ಳಿ, ಉಪಾಧ್ಯಕ್ಷರಾಗಿ ಕೆ.ಸಿ ಪಾವಲಿ, ಶಿವಕುಮಾರ ಮುದುಗಲ್ಲ, ದಯಾನಂದ ಯಡ್ರಾಮಿ, ನಿರಂಜನ ಹೆರೂರ, ಕಾರ್ಯದರ್ಶಿಯಾಗಿ ಬಸವರಾಜ ಕೋರಿ, ಗಿರಿಶ ಶೆಟ್ಟರ್, ಖಜಾಂಚಿಯಾಗಿ ಶಿವಲಿಂಗೇಶ ಗುಂಜೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ವಿಜಯಕುಮಾರ ಕೂಡ್ಲಪ್ಪನವರ, ಮಲ್ಲಿಕಾರ್ಜುನ ಹಿಂಚಿಗೇರಿ, ಪ್ರವೀಣ ಶೆಟ್ಟರ, ಮುರುಘೇಶ ಬಾಲೇಹೊಸೂರ, ಶಿವಬಸಪ್ಪ ಚೌಶೆಟ್ಟಿ, ಶಿವಣ್ಣ ಶೆಟ್ಟರ, ಸಲಹಾ ಸಮಿತಿ ಸದಸ್ಯರಾಗಿ ಪ್ರಭುಗೌಡ ಬಸನಗೌಡ್ರ, ನಾಗರಾಜ ವಿಭೂತಿ, ಮಾಂತಣ್ಣ ಮಾಸೂರ, ವಿಜಯಕುಮಾರ ಚಿನ್ನಿಕಟ್ಟಿ, ಸಿದ್ದಲಿಂಗಪ್ಪ ಮಹಾರಜಪೇಟ ಅಧಿಕಾರ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net