ರಾಜ್ಯ ವಿದ್ಯಾರ್ಥಿನಿಯರ ಸಂಚಾಲಕರಾಗಿ ಆಯ್ಕೆ

4 HVR 4
Published on

ಹಾವೇರಿ: ಎಸ್‌ಎಫ್‌ಐ ವಿದ್ಯಾರ್ಥಿನಿಯರ ವಿಭಾಗದ ರಾಜ್ಯ ಸಂಚಾಲಕಿಯರಾಗಿ ಹಾವೇರಿಯ ಮಲ್ಲಿಗೆ ಜಟ್ಟೆಣ್ಣನವರ ಹಾಗೂ ಲಕ್ಷ್ಮೀ ಡಿ. ಆಯ್ಕೆಯಾಗಿದ್ದಾರೆ.
ಕಲಬುರ್ಗಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿನಿಯರ ರಾಜ್ಯ ಮಟ್ಟದ ಸಮಾವೇಶದಲ್ಲಿ ವಿದ್ಯಾರ್ಥಿಯರ ಸಮಸ್ಯೆಗಳ ನಿವಾರಣೆಗಾಗಿ ರಾಜ್ಯಮಟ್ಟದಲ್ಲಿ ಹೋರಾಟದ ಮೂಲಕ ಸರ್ಕಾರದ ಮೇಲೆ ಒತ್ತಡ ತರಲು ಹಾಗೂ ವಿದ್ಯಾರ್ಥಿನಿಯರ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ನೂತನ ರಾಜ್ಯ ಸಂಚಾಲಕ ಸಮಿತಿ ರಚನೆ ಮಾಡಲಾಯಿತು. ಈ ಸಮಿತಿಯಲ್ಲಿ ಜಿಲ್ಲೆಯ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ ಎಂದು ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net