

ಹಾವೇರಿ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ವಿರೋಧಿಸಿ, ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಸ್‌ಎಫ್‌ಐ ವತಿಯಿಂದ ಜ.12ರಂದು ಹಮ್ಮಿಕೊಂಡಿರುವ ಪಾರ್ಲಿಮೆಂಟ್ ಚಲೋ ಚಳವಳಿಯ ಪೋಸ್ಟರ್ ಅನ್ನು ನಗರದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.
ಎಸ್‌ಎಫ್‌ಐ ಮಾಜಿ ಜಿಲ್ಲಾಧ್ಯಕ್ಷೆ ರೇಣುಕಾ ಕಹಾರ ಮಾತನಾಡಿ, ಶಿಕ್ಷಣವೆಂಬುದು ಸಂಪೂರ್ಣ ಖಾಸಗೀಕರಣ ಆಗುತ್ತಿದೆ ಹೊರತು ಶಿಕ್ಷಣ ಸಾರ್ವತ್ರಿಕಗೊಳತ್ತಿಲ್ಲ. ಹಾಗಾಗಿ ಪ್ರಸ್ತುತ ಸರ್ಕಾರಿ ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳು ಮೂಲ ಸೌಕರ್ಯಗಳ ಕೊರತೆಯಲ್ಲಿ ಬಳಲುತ್ತಿವೆ. ಅತಿಥಿ ಉಪನ್ಯಾಸಕರ ಹೋರಾಟ ತಿಂಗಳು ಕಳೆದರೂ ಸಮಸ್ಯೆ ಬಗೆಹರಿಯುತ್ತಿಲ್ಲ. 2 ಲಕ್ಷ ಉದ್ಯೋಗ ನೀಡುತ್ತವೆ ಎಂದು ಸುಳ್ಳು ಭರವಸೆ ನೀಡಿದ ಕೇಂದ್ರ ಸರ್ಕಾರ, ಉದ್ಯೋಗದ ಸೃಷ್ಟಿ ಬದಲಾಗಿ ಉದ್ಯೋಗಗಳನ್ನು ನಾಶಮಾಡುತ್ತಿದೆ ಎಂದರು ಆರೋಪಿಸಿದರು.
ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್., ಗಂಗಯ್ಯ ಕುಲಕರ್ಣಿ, ವಿವೇಕ ಫನಸೆ, ಅರುಣ ಆರೇರ, ಪ್ರೇಮಾ ಅಳ್ಳಳ್ಳಿ, ರೇಣುಕಾ ಬಿ.ಕೆ., ಲಕ್ಷ್ಮಣ ಮರಡೂರ, ಬಸಯ್ಯ ಸಾಲಿಮಠ, ಈಶ್ವರಿ ದೊಡ್ಡಮನಿ, ಇತರರಿದ್ದರು.