ಪತ್ರಕರ್ತರ ಮೇಲೆ ನಡೆದ ದಾಳಿ ಖಂಡಿಸಿ ಡಿವೈಎಫ್‌ಐ ಪ್ರತಿಭಟನೆ

7 HVR 8
Published on

ಹಾವೇರಿ: ಧರ್ಮಸ್ಥಳದ ಅಸಹಜ ಸಾವುಗಳ ಪ್ರಕರಣದ ಎಸ್.ಐ.ಟಿ ತನಿಖೆಯ ವರದಿಗೆ ತೆರಳಿದ್ದ ಯೂಟ್ಯೂಬರ್‌ಗಳು ಹಾಗೂ ಪತ್ರಕರ್ತರ ಮೇಲೆ ನಡೆದ ದಾಳಿ ಖಂಡಿಸಿ ಹಾಗೂ ಗುತ್ತಲದ 9ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಶಿಕ್ಷಕನ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ವತಿಯಿಂದ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ಡಿವೈಎಫ್‌ಐ ಕಾರ್ಯದರ್ಶಿ ಬಸವರಾಜ ಪೂಜಾರ, ಎಸ್‌ಎಫ್‌ಐ ಅಧ್ಯಕ್ಷೆ ಚೈತ್ರಾ ಕೊರವರ, ಗಂಗಾ ಯಲ್ಲಾಪುರ, ಮಂಜುಳಾ ಅಕ್ಕಿ, ಬಸವರಾಜ ಎಸ್., ಮುತ್ತಪ್ಪ ಲಮಾಣಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net