ನಗರ ಸಾರಿಗೆ ಆರಂಭ; ವಿದ್ಯಾರ್ಥಿಗಳ ಸಂಭ್ರಮ

12 HVR 5
Published on

ಹಾವೇರಿ: ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಬಸ್ ಬಿಡಲು ಹಲವು ಬಾರಿ ವಿದ್ಯಾರ್ಥಿಗಳು ಹೋರಾಟ ಮಾಡಿದ ಫಲವಾಗಿ ಶನಿವಾರ ಕೊನೆಗೂ ಬಸ್ ನಿಲ್ದಾಣದಿಂದ ಕಾಲೇಜ್‌ವರೆಗೆ ನಗರ ಸಾರಿಗೆ ಆರಂಭಿಸಲಾಯಿತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಬಸ್ ಎದುರು ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು. ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ, ತಾಲೂಕು ಕಾರ್ಯದರ್ಶಿ ಕಾವ್ಯಾ ಹನಗೋಡಿಮಠ, ವಿವೇಕ ಫನಸೆ, ಅಭಿಷೇಕ ಗುದಗಿ, ಭರತ ಮೂಲಿಮನಿ, ಮುತ್ತುರಾಜ ಪೂಜಾರ, ರಮೇಶ ವಡ್ಡರ, ಲಕ್ಷ್ಮೀ ಎಚ್., ದಿವ್ಯಾ ಕೆ.ಆರ್., ಭವ್ಯಾ ನಾಡಿಗೇರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net