ಹಾವೇರಿ: ರೇಷ್ಮೆ ಇಲಾಖೆಯಿಂದ 2022-23ನೇ ಸಾಲಿನ ರೇಷ್ಮೆ ಕೃಷಿ ಪ್ರಶಸ್ತಿಗಾಗಿ ಉತ್ತಮ ಪ್ರಗತಿ ಸಾಧಿಸಿದ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಂದಲೂ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಮಲ್ಟಿ ಎಂಡ್/ಕಾಟೇಜ್/ಸ್ವಯಂ ಚಾಲಿತ ನೂಲು ಬಿಚ್ಚಾಣಿಕೆದಾರರು ಕಡ್ಡಾಯವಾಗಿ ಪ್ರಸಕ್ತ ಸಾಲಿಗೆ ನಿಯಮಾನುಸಾರ ನೋಂದಾಯಿಸಿರಬೇಕು. ಕನಿಷ್ಠ ಆರು ಮಲ್ಟಿ ಎಂಡ್ ಬೇಸಿನ್ ಹೊಂದಿರಬೇಕು. ಸ್ವಯಂ ಚಾಲಿತ ನೂಲು ಬಿಚ್ಚಣಿಕೆದಾರರು ಸ್ವಯಂ ಚಾಲಿತ ನೂಲು ಬಿಚ್ಚಾಣಿಕೆ ಯಂತ್ರ ಸ್ಥಾಪಿಸಿರಬೇಕು. ರೇಷ್ಮೆ ಗೂಡು ಮಾರುಕಟ್ಟೆಯಲ್ಲಿಯೇ(ದಾಖಲಾತಿಯೊಂದಿಗೆ ದೃಢೀಕರಿಸಬೇಕು) ಗೂಡು ಖರೀದಿಸಿರಬೇಕು. ವರ್ಷದಲ್ಲಿ ಖರೀದಿಸಿದ ಗೂಡನ್ನು ಸಂಪೂರ್ಣವಾಗಿ ನೂಲಿ ಬಿಚ್ಚಾಣಿಕೆಗೆ ಬಳಸಿರಬೇಕು. ಖರೀದಿಸಿದ ಗೂಡುಗಳನ್ನು ಇತರೆ ಮಾರುಕಟ್ಟೆಗಳಲ್ಲಿ/ ಇತರರಿಗೆ ಮಾರಾಟ ಮಾಡಬಾರದು.
ಅರ್ಹ ರೇಷ್ಮೆ ನೂಲು ಬಿಚ್ಚಾಣಿಕೆದಾರರು ಸ್ಥಳೀಯ ರೇಷ್ಮೆ ವಿಸ್ತರಣಾಧಿಕಾರಿಗಳು(ರೀಲಿಂಗ್)/ರೇಷ್ಮೆ ಸಹಾಯಕ ನಿರ್ದೇಶಕರ(ಗೂನಂಚ) ಕಚೇರಿ ಸಂಪರ್ಕಿಸಿ ಅಗತ್ಯ ಮಾಹಿತಿಗಳನ್ನು ದಾಖಲಾತಿಗಳೊಂದಿಗೆ ಒದಗಿಸಿ ಅರ್ಜಿ ಪಡೆಯಬೇಕು. ಭರ್ತಿ ಮಾಡಿದ ಅರ್ಜಿಯನ್ನು ಅ.20ರೊಳಗೆ ಸಲ್ಲಿಸಬೇಕು ಎಂದು ರೇಷ್ಮೆ ಉಪನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.