ಬುದ್ಧಿಮಾಂದ್ಯ ಮಕ್ಕಳೊಂದಿಗೆ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ

30 HVR 6
Published on

ಹಾವೇರಿ: ದೇಶದ ಮೊದಲ ಶಿಕ್ಷಕಿ ಎಂದೇ ಪ್ರಸಿದ್ಧಿ ಪಡೆದಿರುವ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆಯನ್ನು ನಗರದ ಹೊರ ವಲಯದಲ್ಲಿರುವ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಗುರುವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ ಹಾಗೂ ಹಾವೇರಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ನೂರಕ್ಕೂ ಹೆಚ್ಚು ಮಕ್ಕಳಿಗೆ ನೋಟ್‌ಬುಕ್ ಮತ್ತು ಪೆನ್ನು ವಿತರಿಸಲಾಯಿತು.

ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷೆ ರಾಜಶ್ರೀ ಅಶೋಕ ಸಜ್ಜೇಶ್ವರ ಮಾತನಾಡಿ, ಸದಾ ನೊಂದವರ ಪರವಾಗಿ, ದನಿ ಎತ್ತಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿದ ಸಾವಿತ್ರಿಬಾಯಿ ಎಲ್ಲ ಕಾಲಕ್ಕೂ ಮಾದರಿಯ ಹೋರಾಟಗಾರ್ತಿ. ಅವರ ಆದರ್ಶಗಳು ಶಿಕ್ಷಕರಿಗೆ ದಾರಿ ದೀಪವಾಗಿವೆ ಎಂದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ಗೀತಾ ಸುತ್ತಕೋಟಿ ಮಾತನಾಡಿ, ಇದೊಂದು ವಿಶೇಷ ರೂಪದ ಜನ್ಮ ದಿನಾಚರಣೆಯಾಗಿದ್ದು, ಅಂಗವೈಕಲ್ಯದಿಂದ ಬಳಲುವ ಮಕ್ಕಳಿಗೆ ಮಕ್ಕಳಿಗೆ ಸಾಂತ್ವನ ನೀಡಿದ್ದು ಸಂಘಕ್ಕೆ ಗೌರವ ತಂದಿದೆ. ಸಾವಿತ್ರಿಬಾಯಿ ಫುಲೆ ಸಂಸ್ಥೆಯು ರಾಜ್ಯಾದ್ಯಂತ ತನ್ನ ಚಟುವಟಿಕೆಗಳನ್ನು ಸಮಾಜ ಪರವಾಗಿ ಮಾಡುತ್ತಿದೆ ಎಂದರು.

ವೇದಿಕೆಯಲ್ಲಿ ಬುದ್ಧಿಮಾಂದ್ಯ ಸಂಸ್ಥೆಯ ಪ್ರಧಾನ ಶಿಕ್ಷಕ ಬಸವಂತಪ್ಪ ಕಾಳಣ್ಣನವರ, ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಕಲಾ ಬಳಗದ ಪೃಥ್ವಿರಾಜ ಬೆಟಗೇರಿ, ರಾಜೇಂದ್ರ ಹೆಗಡೆ ಇದ್ದರು.

ಶಿಕ್ಷಕಿಯರಾದ ಜಿಲ್ಲಾ ಸಹ ಕಾರ್ಯದರ್ಶಿ ಎ.ಎಸ್ ಪಾಟೀಲ, ಪಾರ್ವತಿ ಪಾಟೀಲ, ಪದ್ಮಾವತಿ ಕಲ್ಲೂರ, ಎ.ಟಿ ನೀರಲಗಿ, ಕೆ.ಕೆ. ಪತ್ತಾರ, ವಿಜಯಲಕ್ಷ್ಮೀ ಬಡಿಗೇರ, ರೂಪಾಂಜಲಿ ಓಣಿಮಠ, ಎ. ಮೀರಾಬಾಯಿ, ಎಸ್.ವಿ ಸೂರಗೊಂಡ, ಆರ್.ಎಸ್ ಸುಂಕದ, ವಿ.ಜಿ ಹಿರೇಮಠ, ಅನಸೂಯಾ ಬಳ್ಳಾರಿ, ಶಶಿಕಲಾ ಅತ್ತಿಕಟ್ಟಿ, ಆರ್.ಎಸ್ ಬಣಕಾರ, ಚಂದ್ರಕಲಾ ನಂದಣ್ಣನವರ, ಯಶೋಧಾ ಮಾರೇರ, ರೇಣುಕಾ ಬಸೆನಾಯ್ಕರ, ಮಂಜುಳಾ ಕುಲಕರ್ಣಿ, ಅನ್ನಪೂರ್ಣ ಚವ್ಹಾಣ, ಮಂಜುಳಾ ನಾಮದೇವ, ನಿರ್ಮಲಾ ಮತ್ತೂರ, ರಾಜೇಶ್ವರಿ ಬಿಲ್ಲಹಳ್ಳಿ, ಸಾವಿತ್ರಿ ಹಂಜಗಿ, ಇತರರಿದ್ದರು.

ಸಂಘದ ತಾಲೂಕು ಅಧ್ಯಕ್ಷೆ ಅಕ್ಕಮಹಾದೇವಿ ಸ್ವಾಗತಿಸಿದರು. ಬಸಯ್ಯ ಹುಚ್ಚಯ್ಯನವರಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಭುವನೇಶ್ವರಿ ಮತ್ತಿಕಟ್ಟಿ ನಿರೂಪಿಸಿದರು. ಅಕ್ಕಮ್ಮ ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net