ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ಸೆ.30ರಂದು

Published on

ಸವಣೂರ: ತಾಲೂಕಿನ ಸಿದ್ದಾಪುರ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದ ಬಳಿ ಸೆ.30ರಂದು ಸಂಜೆ 4 ಗಂಟೆಗೆ ಶ್ರೀ ಗಜಾನನ ಯುವಕ ಮಂಡಳದ ವತಿಯಿಂದ ಪ್ರಥಮ ಬಾರಿಗೆ ರಾಜ್ಯಮಟ್ಟದ 65 ಕೆಜಿ ಒಳಗಿನ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ.
ಪಿಡಬ್ಲೂೃಡಿ ಗುತ್ತಿಗೆದಾರ ಈರಣ್ಣ ವಾಲಿಶೆಟ್ಟರ ಪಂದ್ಯಾವಳಿ ಉದ್ಘಾಟಿಸಲಿದ್ದು, ಬಿಜೆಪಿ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣವರ ಕ್ರೀಡಾ ಜ್ಯೋತಿ ಬೆಳಗಿಸಲಿದ್ದಾರೆ. ಪ್ರಥಮ ಬಹುಮಾನ 20,001 ರೂ., ದ್ವಿತೀಯ ಬಹುಮಾನ 15,001 ರೂ. ತೃತೀಯ ಬಹುಮಾನ 10,001 ರೂ. ಹಾಗೂ ಉತ್ತಮ ತಂಡಕ್ಕೆ 5,001 ರೂ. ನಗದು ಬಹುಮಾನ ಮತ್ತು ಟ್ರೋಫಿ, ಮತ್ತಿತರ ಬಹುಮಾನ ನೀಡಲಾಗುವುದು ಎಂದು ಮಂಡಳದ ಅಧ್ಯಕ್ಷ ಮುತ್ತಪ್ಪ ಉಳ್ಳಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net