ಮನೆಯಲ್ಲಿ ಪಟಾಕಿ ಸ್ಪೋಟಗೊಂಡು ವ್ಯಾಪಾರಿ ಸಾವು

Published on

ಸವಣೂರ: ಮನೆಯಲ್ಲಿ ಸಂಗ್ರಹಿಸಿ ಇಟ್ಟುಕೊಂಡಿದ್ದ ಪಟಾಕಿ ಸಿಡಿದು ಪಟಾಕಿ ವ್ಯಾಪಾರಿ ಮೃತಪಟ್ಟ ಘಟನೆ ಸವಣೂರ ಪಟ್ಟಣದ ಮಾಲತೇಶ ನಗರದಲ್ಲಿ ಸಂಭವಿಸಿದೆ.

ಷಣ್ಮುಖಪ್ಪ ಬಸವರಾಜ ದೇವಗಿರಿ (55) ಮೃತಪಟ್ಟ ವ್ಯಾಪಾರಿ.

ಗಣೇಶ ಚತುರ್ಥಿ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಮಾರಾಟ ಮಾಡಲು ಷಣ್ಮುಖಪ್ಪ ಡಿಸಿ ಅವರಿಂದ ಲೈಸನ್ಸ್ ಪಡೆದಿದ್ದರು. ಹಬ್ಬದಂದು ಮಾರಾಟ ಮಾಡಿ ಉಳಿದ ಪಟಾಕಿಗಳನ್ನು ಮನೆಯಲ್ಲಿ ಸಂಗ್ರಹಿಸಿ ಇಡಲು ಲೈಸನ್ಸ್ ಪಡೆಯದೇ ಅಕ್ರಮವಾಗಿ ಮನೆಯಲ್ಲಿ ಇಟ್ಟಿದ್ದರು.

ಡಿ.12ರಂದು ಮಧ್ಯಾಹ್ನ ಪಟಾಕಿ ಸಂಗ್ರಹಿಸಿ ಇಟ್ಟಿದ್ದ ಸ್ಥಳದ ಪಕ್ಕದಲ್ಲಿ ಷಣ್ಮುಖಪ್ಪ ಮಲಗಿದ್ದರು. ಈ ವೇಳೆ ಆಕಸ್ಮಿಕವಾಗಿ ಪಟಾಕಿಗೆ ಬೆಂಕಿ ತಗುಲಿ ಸ್ಪೋಟಗೊಂಡು ಷಣ್ಮುಖಪ್ಪ ಅವರಿಗೆ ಗಂಭೀರ ಗಾಯಗಳಾಗಿದ್ದವು. ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net