ಸವಣೂರ: ಸಾಲ ತೀರಿಸಲಾಗದೇ ಮನನೊಂದ ರೈತರೊಬ್ಬರು ಹೊಲದ ಬಳಿ ಹಾದು ಹೋಗಿದ್ದ ವಿದ್ಯುತ್ ಕಂಬದ ವೈರ್ ಹಿಡಿದು ವಿದ್ಯುತ್ ತಗುಲಿ ಮೃತಪಟ್ಟ ಘಟನೆ ಸವಣೂರ ತಾಲೂಕು ಡೊಂಬರಮತ್ತೂರ ಗ್ರಾಮದಲ್ಲಿ ನಡೆದಿದೆ.
ನಾಗಪ್ಪ ನಿಸ್ಸೀಮಪ್ಪ ಚಕ್ರಸಾಲಿ (55) ಮೃತಪಟ್ಟ ರೈತ. ನಾಗಪ್ಪ ಕೃಷಿ ಚಟುವಟಿಕೆಗಾಗಿ ಹಿರೇಮರಳಿಹಳ್ಳಿಯ ಕೆವಿಜಿ ಬ್ಯಾಂಕ್‌ನಲ್ಲಿ 1.20 ಲಕ್ಷ ರೂ. ಬೆಳೆಸಾಲ, ಹಾವೇರಿಯ ಐಐಎಫ್‌ಎಲ್ ಸಮಸ್ತ ಫೈನಾನ್ಸ್‌ನಲ್ಲಿ 60 ಸಾವಿರ ರೂ., ಕೈಗಡ ಸಾಲ 2 ಲಕ್ಷ ರೂ. ಸಾಲ ಮಾಡಿದ್ದರು.
ಸರಿಯಾಗಿ ಮಳೆ ಬಾರದೇ ಇಳುವರಿ ಕೂಡ ಬಂದಿರಲಿಲ್ಲ. ಹೀಗಾದರೆ ಸಾಲ ಹೇಗೆ ತೀರಿಸುವುದು ಎಂದು ಮನನೊಂದು ಗುರುವಾರ ಹೊಲದಲ್ಲಿ ಕರೆಂಟ್ ವೈರ್ ಹಿಡಿದು ಕರೆಂಟ್ ಶಾಕ್‌ನಿಂದ ಮೃತಪಟ್ಟಿದ್ದಾರೆ ಎಂದು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.